ಕರಾವಳಿಕ್ರೈಂ

ಪೆರುವಾಯಿ: ಅನ್ಯಕೋಮಿನ ಯುವತಿ ಜೊತೆಗಿದ್ದ ಇಬ್ಬರು ಯುವಕರು: ಮೂವರು ಪೊಲೀಸ್ ವಶಕ್ಕೆ..?



ವಿಟ್ಲ: ಇಬ್ಬರು ಅನ್ಯಕೋಮಿನ ಯುವಕರು ಸಹಿತ ಓರ್ವ ಯುವತಿ ಪತ್ತೆಯಾದ ಘಟನೆ ವಿಟ್ಲ ಪೊಲೀಸ್ ಠಾಣಾ ವ್ಯಾಪ್ತಿಯ ಪೆರುವಾಯಿ ಸಮೀಪ ನಡೆದಿದೆ.

ಈ ಮೂವರು ಬಸ್ಸೊಂದರಲ್ಲಿ ಬಂದು ಕುದ್ದುಪದವಿನಲ್ಲಿ ಬಸ್ಸಿಂದ ಇಳಿದು ಅಲ್ಲೇ ಪಕ್ಕದಲ್ಲಿದ್ದ ಬಸ್ಸು ತಂಗುದಾಣದಲ್ಲಿ ಕುಳಿತಿದ್ದ ವೇಳೆ ಸ್ಥಳೀಯರು ಅವರನ್ನು ವಿಚಾರಿಸಿದಾಗ ಉಪ್ಪಳ ಕಡೆ ತೆರಳುವ ಇನ್ನೊಂದು ಬಸ್ಸಿನಲ್ಲಿ ಆ ಮೂವರು ಅಲ್ಲಿಂದ ತೆರಳಿ ಪೆರುವಾಯಿಯಲ್ಲಿ ಬಸ್ಸಿಂದಿಳಿದು ಅಲ್ಲೇ ಪಕ್ಕದಲ್ಲಿರುವ ಬಸ್ಸು ತಂಗುದಾಣದಾಣದಲ್ಲಿ ಕುಳಿತಿದ್ದರು ಎನ್ನಲಾಗಿದೆ.

ಮೂವರು ತುಂಬಾ ಸಲುಗೆಯಿಂದ ಇರುವುದನ್ನು ಕಂಡ ಸ್ಥಳೀಯರು ಅವರನ್ನು ವಿಚಾರಿಸಿ ಬಳಿಕ ವಿಟ್ಲ ಠಾಣಾ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕಾಗಮಿಸಿದ ವಿಟ್ಲ ಠಾಣಾ ಪೊಲೀಸರು ಆ ಮೂವರನ್ನು ವಶಕ್ಕೆ ಪಡೆದಿರುವುದಾಗಿ ಮಾಹಿತಿ ಲಭಿಸಿದೆ. ಮೂವರೂ ವಿದ್ಯಾರ್ಥಿಗಳಾಗಿದ್ದು, ಪೆರ್ಲ ಆಸುಪಾಸಿನವರಾಗಿದ್ದು, ಅವರು‌ ಉಪ್ಪಳ ಕಡೆ ಸುತ್ತಾಡಲು ತೆರಳುವ ಸಲುವಾಗಿ ಬಂದಿರುವುದಾಗಿ ಅವರು ಪೊಲೀಸರಲ್ಲಿ ತಿಳಿಸಿರುವುದಾಗಿ ತಿಳಿದು ಬಂದಿದೆ.

Leave a Reply

Your email address will not be published. Required fields are marked *

error: Content is protected !!