ಪ್ರದೀಪ್ ಈಶ್ವರ್ ಸದನದಲ್ಲಿ ಮಾತನಾಡಿದ್ದ ಸಂದರ್ಭ ಮೇಜು ತಟ್ಟಿ ಬೆಂಬಲ: ಸಾವಾಗಿಲ್ಲ ಮಾರ್ರೆ ನಿಜ! ನಯನಾ ಮೋಟಮ್ಮ ಸ್ಪಷ್ಟನೆ
ಶಾಸಕ ಪ್ರದೀಪ್ ಈಶ್ವರ್ ಸದನದಲ್ಲಿ ಮಾತನಾಡಿದ್ದ ಸಂದರ್ಭದಲ್ಲಿ ಸದನದಲ್ಲಿ ಮೇಜು ತಟ್ಟಿ ಬೆಂಬಲ ಸೂಚಿಸಿದ್ದ ಶಾಸಕಿ ನಯನಾ ಮೋಟಮ್ಮ ಕಳೆದ ಕೆಲವು ದಿನಗಳಿಂದ ಟ್ರೋಲ್ ಆಗಿದ್ದರು. ಇದೀಗ ಅದೇ ವಿಡಿಯೋವನ್ನು ತಮ್ಮ ಖಾತೆಯಲ್ಲಿ ಶೇರ್ ಮಾಡಿರುವ ನಯನಾ ಮೋಟಮ್ಮ ಈ ವಿಡಿಯೋಗೆ ಸ್ಪಷ್ಟನೆ ನೀಡಿದ್ದಾರೆ.

ಸಾವಾಗಿಲ್ಲ ಮಾರ್ರೆ ನಿಜ! ಆದರೆ ಈ ವಿಡಿಯೋ ಟ್ರೋಲ್ ಮಾಡುವ ಮುನ್ನ ಸ್ವಲ್ಪ ಸಮಾಧಾನದಿಂದ ವರ್ತಿಸಿ. ಪ್ರದೀಪ್ ಈಶ್ವರ್ ಹೇಳಿರುವ ವಿಚಾರದಲ್ಲಿ ಯಾವುದೇ ತಪ್ಪಿಲ್ಲ. ಮಾಹಿತಿ ಕೊರತೆಯಾಗಿದೆ ಅಷ್ಟೇ. ಅವರು ಎತ್ತಿರುವ ಪ್ರಶ್ನೆ ಸರಿಯಾಗಿಯೇ ಇತ್ತು. ಹೀಗಾಗಿಯೇ ನಾನು ಅವರ ಮಾತಿಗೆ ಬೆಂಬಲ ಸೂಚಿಸಿದ್ದೇನೆ ಎಂದು ನಯನಾ ಮೋಟಮ್ಮ ಹೇಳಿದ್ದಾರೆ.