ಸುಹೈಲ್ ಕಂದಕ್ ಗೆ ದ.ಕ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸ್ಥಾನ ನೀಡಲು ಆಗ್ರಹಿಸಿ ಅಭಿಯಾನ
ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾಗಿ ಯುವ ನಾಯಕ ಸುಹೈಲ್ ಕಂದಕ್ ಅವರನ್ನು ನೇಮಕ ಮಾಡಬೇಕೆಂಬ ಆಗ್ರಹ ಕೇಳಿ ಬಂದಿದ್ದು ಈ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಅಭಿಯಾನ ಕೂಡಾ ನಡೆಸಲಾಗುತ್ತಿದೆ.

ಈಗಿರುವ ದಕ್ಷಿಣ ಕನ್ನಡ ಜಿಲ್ಲಾ ಕಾಂಗ್ರೆಸ್ ಸಮಿತಿಯನ್ನು ವಿಭಜಿಸಿ ನೂತನವಾಗಿ ಮಂಗಳೂರು ನಗರ ಜಿಲ್ಲಾ ಸಮಿತಿ ಮತ್ತು ಮಂಗಳೂರು ಗ್ರಾಮಾಂತರ ಸಮಿತಿ ರಚಿಸಲು ಕೆಪಿಸಿಸಿ ಮುಂದಾಗಿದೆ ಎನ್ನಲಾಗುತ್ತಿದೆ.
ಯುವ ಕಾಂಗ್ರೆಸ್ ನಾಯಕ ಸುಹೈಲ್ ಕಂದಕ್ ಅವರಿಗೆ ಜಿಲ್ಲಾಧ್ಯಕ್ಷ ಸ್ಥಾನ ನೀಡಬೇಕೆಂಬ ಆಗ್ರಹದೊಂದಿಗೆ ಅವರ ಬೆಂಬಲಿಗರು, ಅಭಿಮಾನಿಗಳು ಸಾಮಾಜಿಕ ಜಾಲ ತಾಣಗಳಲ್ಲಿ ಅಭಿಯಾನ ನಡೆಸುತ್ತಿದ್ದಾರೆ. ಬಡವರ ಪರ ಕಾಳಜಿ, ನಾಯಕತ್ವ ಗುಣ, ಸಮುದಾಯದ ಬೆಂಬಲ ಇರುವ ಸುಹೈಲ್ ಕಂದಕ್ ಅವರೇ ಜಿಲ್ಲಾಧ್ಯಕ್ಷ ಸ್ಥಾನಕ್ಕೆ ಸೂಕ್ತ ಎಂದು ಅವರ ಪರವಾಗಿರುವವರು ಜಾಲತಾಣಗಳಲ್ಲಿ ಒತ್ತಾಯಿಸುತ್ತಿದ್ದಾರೆ. ಅದಕ್ಕಾಗಿ ವಾಟ್ಸಾಪ್ ಗ್ರೂಪ್ ಮಾಡಿಕೊಂಡು ಅಭಿಯಾನ ಕೂಡಾ ನಡೆಸುತ್ತಿದ್ದಾರೆ.