ಕರಾವಳಿರಾಜಕೀಯ

ಪುತ್ತೂರು: ಯುವ ಕಾಂಗ್ರೆಸ್ ಚುನಾವಣೆ; ಬಾತಿಷಾ ಅಳಕೆಮಜಲು ನಾಮಪತ್ರ ತಿರಸ್ಕೃತ!?

ಪುತ್ತೂರು: ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ ಯುವ ಕಾಂಗ್ರೆಸ್ ಚುನಾವಣೆ ರಂಗೇರಿದ್ದು ಆಕಾಂಕ್ಷಿಗಳು ನಾಮ ಪತ್ರ ಸಲ್ಲಿಸಿದ್ದಾರೆ. ಪುತ್ತೂರು ವಿಧಾನ ಸಭಾ ಕ್ಷೇತ್ರದಲ್ಲಿ  ಆಕಾಂಕ್ಷಿಗಳ ಪೈಕಿ ಅಧ್ಯಕ್ಷ ಸ್ಥಾನಕ್ಕೆ ಪ್ರಬಲ ಆಕಾಂಕ್ಷಿ ಎಂದೇ ಬಿಂಬಿತವಾಗಿದ್ದ ಬಾತಿಷಾ ಅಳಕೆಮಜಲು ಸಲ್ಲಿಸಿದ್ದ ನಾಮಪತ್ರ ತಿರಸ್ಕೃತಗೊಂಡಿರುವುದಾಗಿ ತಿಳಿದು ಬಂದಿದೆ.


ನಾಮಪತ್ರ ತಿರಸ್ಕೃತಗೊಳ್ಳಲು ಕಾರಣ ತಿಳಿದು ಬಂದಿಲ್ಲ. ನಾಮಪತ್ರ ತಿರಸ್ಕೃತ ವಿಚಾರವಾಗಿ ಸಾಮಾಜಿಕ ಜಾಲತಾಣದಲ್ಲಿ ಹಲವು ಕಾಂಗ್ರೆಸ್ ಕಾರ್ಯಕರ್ತರು ತಮ್ಮದೇ ರೀತಿಯ ವಾದ ಪ್ರತಿವಾದ ಶುರು ಮಾಡಿದ್ದಾರೆ. ತಾಂತ್ರಿಕ ತೊಂದರೆಯಿಂದ ತಿರಸ್ಕೃತ ಆಗಿರಬಹುದು ಎಂದು ಕೆಲವರು ಹೇಳುತ್ತಿದ್ದರೆ, ಬಾತಿಷಾ ಅಳಕೆಮಜಲು ಅವರ ನಾಮಪತ್ರ ತಿರಸ್ಕಾರವಾಗುವಂತೆ ಷಡ್ಯಂತ್ರ ನಡೆಸಲಾಗಿದೆ ಎಂದು ಆರೋಪಿಸಿ ಸಾಮಾಜಿಕ ತಾಣದಲ್ಲಿ ಸಂದೇಶ ಹರಿದಾಡುತ್ತಿದೆ. ಹಲವರು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ನಾಮಪತ್ರ ತಿರಸ್ಕೃತಗೊಳ್ಳಲು ಸ್ಪಷ್ಟ ಕಾರಣ ಮಾತ್ರ ತಿಳಿದು ಬಂದಿಲ್ಲ. ಎನ್. ಎಸ್. ಯು. ಐ ಸೇರಿದಂತೆ ವಿದ್ಯಾರ್ಥಿ ಪರ ಹೋರಾಟಗಳಲ್ಲಿ ಮುಂಚೂಣಿಯಲ್ಲಿ ಗುರುತಿಸಿಕೊಳ್ಳುತ್ತಿದ್ದ ಬಾತಿಷ ಅಳಕೆಮಜಲು ಅವರ ನಾಮಪತ್ರ ತಿರಸ್ಕೃತ ಆಗಿರುವುದು ಅವರನ್ನು ಬೆಂಬಲಿಸುತ್ತಿದ್ದವರಿಗೆ ತೀವ್ರ ನಿರಾಸೆ ತಂದಿದೆ.

Leave a Reply

Your email address will not be published. Required fields are marked *

error: Content is protected !!