ಸುಳ್ಯ :ಕೋಳಿ ಪದಾರ್ಥಕ್ಕಾಗಿ ಆರಂಭಗೊಂಡ ಜಗಳ ಕೊಲೆಯಲ್ಲಿ ಅಂತ್ಯ
ಸುಳ್ಯ ಮೊಗ್ರ ಮಾತೃ ಮಜಲು ಪರಿಸರದಲ್ಲಿ ತಂದೆ ಮಗನ ನಡುವೆ ಕೋಳಿ ಪದಾರ್ಥಕ್ಕಾಗಿ ಆದ ಜಗಳ ಮಗನ ಕೊಲೆಯಲ್ಲಿ ಅಂತ್ಯ ಕಂಡಿದೆ ಎಂದು ತಿಳಿದು ಬಂದಿದೆ.

ಮಾತೃ ಮಜಲು ನಿವಾಸಿ ಶೀನ ಎಂಬುವವರು ಹಾಗೂ ಅವರ ಮಗ ಶಿವರಾಮ (32 ವರ್ಷ) ಎಂಬುವರಿಗೆ ನಿನ್ನೆ ರಾತ್ರಿ ಸುಮಾರು 12 ಗಂಟೆಯ ಸಮಯದಲ್ಲಿ ಕೋಳಿ ಪದಾರ್ಥದ ವಿಷಯದಲ್ಲಿ ಜಗಳವಾಗಿದೆ.
ಶವರಾಮ ರಾತ್ರಿ ಮನೆಗೆ ಬರುವಾಗ ಮನೆಯಲ್ಲಿ ಮಾಡಿದ ಕೋಳಿ ಪದಾರ್ಥ ಖಾಲಿ ಆಗಿದೆ ಎನ್ನಲಾಗಿದ್ದು ಈ ವಿಷಯಕ್ಕೆ ತಂದೆಯ ಬಳಿ ಆಕ್ಷೇಪ ವ್ಯಕ್ತಪಡಿಸಿ ತಂದೆ ಮಗನ ನಡುವೆ ಜಗಳ ಆರಂಭವಾಗಿದೆ. ಮಾತಿಗೆ ಮಾತು ಬೆಳೆದು ಶೀನ ಬಡಿಗೆಯಿಂದ ತನ್ನ ಮಗನ ತಲೆಗೆ ಹೊಡೆದಿದ್ದು ಇದರಿಂದ ಬಲವಾದ ಪೆಟ್ಟು ಬಿದ್ದು ಹೆಚ್ಚಿನ ರಕ್ತಸ್ರಾವ ಉಂಟಾಗಿ ಶಿವರಾಮ ಸ್ಥಳದಲ್ಲಿಯೇ ಮೃತಪಟ್ಟಿರುವುದಾಗಿ ತಿಳಿದು ಬಂದಿದೆ.
ವಿಷಯ ತಿಳಿದ ಸುಬ್ರಹ್ಮಣ್ಯ ಪೊಲೀಸರು ಸ್ಥಳಕ್ಕೆ ಆಗಮಿಸಿ ಪರಿಶೀಲನೆ ನಡೆಸಿ ಶೀನನನ್ನು ಬಂಧಿಸಿದ್ದಾರೆ.
ಮೃತ ಶಿವರಾಮ ಪತ್ನಿ ಹಾಗೂ ಎರಡು ಮಕ್ಕಳನ್ನು, ಬಂಧು ಮಿತ್ರರನ್ನು ಅಗಲಿದ್ದಾರೆ.