ಮಿತ್ತೂರಿನಲ್ಲಿ ಸಂಘ ಪರಿವಾರದಿಂದ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಭಾಷಣ: ಸೂಕ್ತ ಕ್ರಮಕ್ಕೆ SDPI ಆಗ್ರಹ
ಇಡ್ಕಿದು ಗ್ರಾಮದ ಮಿತ್ತೂರಿನಲ್ಲಿ ಸಂಘ ಪರಿವಾರದ ಸಂಘಟನೆ ನಡೆಸಿದ ಕಾರ್ಯಕ್ರಮದಲ್ಲಿ ಮುಸ್ಲಿಮರ ವಿರುದ್ಧ ಅವಹೇಳನಕಾರಿ ಭಾಷಣ ಮಾಡಿದ ನರಸಿಂಹ ಮಾಣಿ ವಿರುದ್ಧ ಪ್ರಕರಣ ದಾಖಲಿಸಲು SDPI ಕಬಕ ಬ್ಲಾಕ್ ಅಧ್ಯಕ್ಷ ಉಮ್ಮರ್ ಫಾರೂಕ್ ಕಬಕ ಆಗ್ರಹಿಸಿದ್ದಾರೆ.

ಅತೀ ಹೆಚ್ಚು ಮುಸ್ಲಿಮರಿದ್ದಾರೆ ಎಂಬ ಕಾರಣಕ್ಕಾಗಿ ಮಿತ್ತೂರಿನ ಪಾಟ್ರಕೋಡಿಯನ್ನು ಪಾಕಿಸ್ತಾನಕ್ಕೆ ಹೋಲಿಸಿ ಶಾಂತಿ ಕದಡಲು ಪ್ರಯತ್ನಿಸಿದ ನರಸಿಂಹ ಮಾಣಿಯನ್ನು ಗಡಿಪಾರು ಮಾಡಬೇಕು ಮತ್ತು ಇಂತಹ ಪ್ರಚೋದನಕಾರಿ ಹೇಳಿಕೆ ನೀಡುವವರನ್ನು ಸುಮೊಟೊ ಪ್ರಕರಣ ದಾಖಲಿಸಿ ಬಂಧಿಸಿ ಜೈಲಿಗಟ್ಟಿ ಸಮಾಜದ ಶಾಂತಿ ಕಾಪಾಡಬೇಕೆಂದು ಅವರು ಪ್ರಕಟಣೆಯ ಮೂಲಕ ಪೊಲೀಸ್ ಇಲಾಖೆಯನ್ನು ಒತ್ತಾಯಿಸಿದ್ದಾರೆ.



