ಕರಾವಳಿರಾಜ್ಯ

ರಾಜ್ಯ ಗುಪ್ತಚರ ಇಲಾಖೆಯ ಸಿಬ್ಬಂದಿ ಸರಳಿಕಟ್ಟೆಯ ಅಶ್ರಫ್ ಪಿ.ಎಂ. ಅವರಿಗೆ ಅಸಾಧರಣ್ ಆಸೂಚಣಾ ಕುಶಲತಾ ಪದಕ ಪ್ರದಾನ

ರಾಜ್ಯ ಗುಪ್ತಚರ ಇಲಾಖೆಯ ಪ್ರಧಾನ ಕಛೇರಿಯಲ್ಲಿ ಹಿರಿಯ ಸಹಾಯಕರಾಗಿ ಸೇವೆ ಸಲ್ಲಿಸುತ್ತಿದ್ದ ಬೆಳ್ತಂಗಡಿ ತಾಲೂಕಿನ ಬಾರ್ಯ ಗ್ರಾಮದ ಸರಳಿಕಟ್ಟೆಯ ಅಶ್ರಫ್ ಪಿ.ಎಂ. ಇವರಿಗೆ ಕೇಂದ್ರ ಸರಕಾರವು ಅಸಾಧರಣ್ ಆಸೂಚಣಾ ಕುಶಲತಾ ಪದಕ 2021ಕ್ಕೆ
ಹೆಸರು ಸೂಚಿಸಿ ಶಿಫಾರಸ್ಸು ಮಾಡಿದ್ದು ರಾಜ್ಯ ಗೃಹ ಸಚಿವ ಆರಗ ಜ್ಞಾನೇಂದ್ರ ಅವರು ಇಂದು ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಪದಕ ಪ್ರದಾನ ಮಾಡಿದರು.

ದೇಶದ ಪ್ರಮುಖ ತನಿಖಾ ಸಂಸ್ಥೆಗಳಾದ ಐಬಿ,ರಾ,ಗುಪ್ತಚರ ದಳ, ಎನ್ಐಎ ಮತ್ತು ಇಂಟೆಲಿಜನ್ಸಿ ಯುನಿಟ್ ಗಳ ಅಧಿಕಾರಿ ಮತ್ತು ಸಿಬ್ಬಂದಿಗಳು ಇಲಾಖೆಗೆ ಸಲ್ಲಿಸುವ ಗಣನೀಯ ಸೇವೆಯನ್ನು ಗುರುತಿಸಿ ಕೇಂದ್ರ ಗೃಹ ಇಲಾಖೆಯು ಅಸಾಧರಣ್ ಆಸೂಚಣಾ ಕುಶಾಲತಾ ಪದಕ ಪುರಸ್ಕಾರವನ್ನು ನೀಡುತ್ತಿದೆ. ಈ ಪದಕಕ್ಕೆ ಆಯ್ಕೆಯಾದ ರಾಜ್ಯದ ಏಕೈಕ ಸಿಬ್ಬಂದಿಯಾಗಿದ್ದಾರೆ.

ರಾಜ್ಯ ಗುಪ್ತಚರ ಇಲಾಖೆಯ ನಿರ್ದೇಶಕರು ದಯಾನಂದ್ ಬಿ. ಐಪಿಎಸ್ ಅವರು ತಮ್ಮ ಇಲಾಖೆಯ ಸಿಬ್ಬಂದಿ ಕೇಂದ್ರ ಸರಕಾರದ ಪುರಸ್ಕಾರಕ್ಕೆ ಆಯ್ಕೆಯಾದ ಪತ್ರವನ್ನು ಈ ಮೊದಲು ಅಶ್ರಫ್ ಅವರಿಗೆ ನೀಡುವುದರ ಮೂಲಕ ಅಭಿನಂದಿಸಿದ್ದರು.

2018ರಲ್ಲಿ ಮುಖ್ಯಮಂತ್ರಿ ಚಿನ್ನದ ಪದಕಕ್ಕೆ ಆಯ್ಕೆ: ರಾಜ್ಯ ಸರಕಾರವು ಅಶ್ರಫ್ ಪಿ.ಎಂ ಅವರ ಸೇವೆಯನ್ನು ಗುರುತಿಸಿ ಪೊಲೀಸ್ ಇಲಾಖೆಗೆ ರಾಜ್ಯ ಸರಕಾರ ನೀಡುವ ಅತ್ಯುನ್ನತ ಪುರಸ್ಕಾರವಾದ ಮುಖ್ಯಮಂತ್ರಿ ಚಿನ್ನದ ಪದಕವನ್ನು 2018ರಲ್ಲಿ ನೀಡಿ ಗೌರವಿಸಿತ್ತು.

ಈ ಹಿಂದೆ ಗುಪ್ತಚರ ಇಲಾಖೆಯ ಮುಖ್ಯಸ್ಥರಾಗಿದ್ದ ಬೆಂಗಳೂರು ನಗರ ಆಯುಕ್ತರಾಗಿದ್ದ ಕಮಲ್ ಪಂತ್ ಐಪಿಎಸ್ ಅವರೂ ಕೂಡ ರಾಜ್ಯ ಗುಪ್ತಚರ ಇಲಾಖೆಗೆ ಅಶ್ರಫ್ ಅವರ ಸೇವೆಯನ್ನು ಗುರುತಿಸಿ ಪ್ರಶಂಸನೀಯ ಪತ್ರವನ್ನು ನೀಡಿ ಗೌರವಿಸಲಾಗಿತ್ತು. ರಾಜ್ಯ ಗುಪ್ತಚರ ಇಲಾಖೆಯ ಹೆಚ್ಚುವರಿ ನಿರ್ದೇಶಕರು ಡಾ. ಎ. ಸುಬ್ರಮಣ್ಯೇಶ್ವರ ರಾವ್ ಐಪಿಎಸ್ ಅವರೂ ಕೂಡ ಗುಪ್ತಚರ ಇಲಾಖೆಗೆ ಪಿ.ಎಂ. ಅಶ್ರಫ್ ಅವರು ಸಲ್ಲಿಸುವ ಸೇವೆಯನ್ನು ಮನಗಂಡು ಅವರ ಕಾರ್ಯವೈಖರಿಗೆ ಇತ್ತೀಚೆಗೆ ಪ್ರಶಂಸನಾ ಪತ್ರವನ್ನು ನೀಡಿ ಗೌರವಿಸಿದ್ದರು.

Leave a Reply

Your email address will not be published. Required fields are marked *

error: Content is protected !!