ಕರಾವಳಿ

ಸಂಘಟನೆಗಳ ಒತ್ತಡ: ಯೂ ಟರ್ನ್ ಹೊಡೆದ ಆಡಳಿತ ಮಂಡಳಿ: ಸುಳ್ಯ ಶ್ರೀ ಚನ್ನಕೇಶವ ದೇವಸ್ಥಾನದ ಜಾತ್ರಾ ಸಂತೆಯಲ್ಲಿ ಅನ್ಯ ಧರ್ಮೀಯರಿಗೆ ವ್ಯಾಪಾರಕ್ಕೆ ಅವಕಾಶವಿಲ್ಲ

Oplus_131072

ಸುಳ್ಯ ಜಾತ್ರೋತ್ಸವದ ಸಂತೆಯಲ್ಲಿ ವ್ಯಾಪಾರ ವಹಿವಾಟು ನಡೆಸಲು ಸ್ವಜಾತಿಯವರಿಗೆ,ಅನ್ಯ ಜಾತಿಯವರಿಗೆ ಅವಕಾಶಗಳ ಬಗ್ಗೆ ಕಳೆದ ಕೆಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ, ಅಲ್ಲದೆ ಪರ ವಿರೋಧ ಚರ್ಚೆಗಳು ನಡೆಯುತ್ತಿದ್ದವು.

ಜ.2ರಂದು ನಡೆದ ಆಡಳಿತ ಸಮಿತಿಯ ಪೂರ್ವಭಾವಿ ಸಭೆ


ಇದರ ನಡುವೆ ಕಳೆದ ಎರಡು ದಿನಗಳ ಹಿಂದೆ ಎಲ್ಲ ಧರ್ಮೀಯರಿಗೆ ಮುಕ್ತ ವ್ಯಾಪಾರಕ್ಕೆ ಅವಕಾಶ ನೀಡಲಾಗುತ್ತದೆ ಎಂದು ಆಡಳಿತ ಮಂಡಳಿ ನಡೆಸಿದ ಪೂರ್ವಭಾವಿ ಸಭೆಯಲ್ಲಿ ಘೋಷಿಸಲಾಗಿದ್ದು ಇದರ ಕುರಿತು ಪರ ವಿರೋಧ ಚರ್ಚೆಗಳು ಆರಂಭಗೊಂಡವು. ಇದನ್ನು ಹಿಂದೂ ಸಂಘಟನೆಗಳು ವಿರೋಧ ಮಾಡಿ ಇಂದು ಸುಳ್ಯ ತಹಶೀಲ್ದಾರರು ಸೇರಿದಂತೆ, ದೇವಸ್ಥಾನ ಆಡಳಿತ ಮಂಡಳಿಯ ಅಧ್ಯಕ್ಷರಿಗೆ, ಸುಳ್ಯ ಪೊಲೀಸ್ ಠಾಣೆಗೆ ಸಂಘಟನೆಯವರು ಮನವಿಯನ್ನು ನೀಡಿ, ಜಾತ್ರೆಯಲ್ಲಿ ಕೇವಲ ಹಿಂದೂ ಧರ್ಮಿಯರಿಗೆ ಮಾತ್ರ ಅವಕಾಶ ನೀಡುವಂತೆ ಒತ್ತಾಯ ಮಾಡಿದ್ದರು.


ಹಿಂದೂ ಸಂಘಟನೆಗಳ ಪ್ರಮುಖರು ಹಿಂದೂಗಳಿಗೆ ಮಾತ್ರ ಅವಕಾಶ ನೀಡಬೇಕೆಂದು ಚೆನ್ನಕೇಶವ ದೇವಸ್ಥಾನದ ಜೀರ್ಣೋದ್ದಾರ ಸಮಿತಿ ಅಧ್ಯಕ್ಷ ಡಾ|ಕೆ.ವಿ. ಚಿದಾನಂದ ಅವರಿಗೂ ಮನವಿ ಮಾಡಿದ್ದರು.


ತಕ್ಷಣ ಇದಕ್ಕೆ ಸ್ಪಂದಿಸಿದ ಡಾ|ಕೆ.ವಿ. ಚಿದಾನಂದ ಅವರು ಇಂದು ಸಂಜೆ ತುರ್ತು ಸಭೆಯನ್ನು ಕರೆದಿದ್ದರು. ಅದರಂತೆ ಎಲ್ಲರ ನಿರ್ಣಯವನ್ನು ತೆಗೆದುಕೊಂಡು ಅಂತಿಮವಾಗಿ ಹಿಂದೂಗಳಿಗೆ ಮಾತ್ರ ವ್ಯಾಪಾರಕ್ಕೆ ಅವಕಾಶ ಎಂಬ ನಿರ್ಧಾರಕ್ಕೆ ಬರಲಾಯಿತು ಎಂದು ತಿಳಿದು ಬಂದಿದೆ.
ಒಟ್ಟಿನಲ್ಲಿ ಪರ ವಿರೋಧ ಚರ್ಚೆಗಳು ಈ ಬಾರಿಯ ಸುಳ್ಯ ಜಾತ್ರೆಯ ಸಂತೆಗೆ ಯಾವ ರೀತಿಯ ಪರಿಣಾಮ ಬೀರುತ್ತದೆ ಎಂಬುದನ್ನು ಕಾದು ನೋಡಬೇಕಾಗಿದೆ.

Leave a Reply

Your email address will not be published. Required fields are marked *

error: Content is protected !!