ಎಸ್.ಡಿ.ಪಿ.ಐ.ಉಪ್ಪಿನಂಗಡಿ ಹಾಗೂ ಶಾಫಿ ಬೆಳ್ಳಾರೆ ಅಭಿಮಾನಿ ಬಳಗ ವತಿಯಿಂದ ಬೃಹತ್ ರಕ್ತದಾನ ಶಿಬಿರ
ಉಪ್ಪಿನಂಗಡಿ : ರಕ್ತ ಕೊಟ್ಟು ಭಾಂದವ್ಯ ಕಟ್ಟು, ರಕ್ತ ದಾನ ಮಾಸಾಚರಣೆಯ ಪ್ರಯುಕ್ತ ಸೋಶಿಯಲ್ ಡೆಮಾಕ್ರಟಿಕ್ ಪಾರ್ಟಿ ಆಫ್ ಇಂಡಿಯಾ ಉಪ್ಪಿನಂಗಡಿ ಬ್ಲಾಕ್ ಸಮಿತಿಯ ವತಿಯಿಂದ ಉಪ್ಪಿನಂಗಡಿಯ HM ಹಾಲ್ ನಲ್ಲಿ ಬೃಹತ್ ರಕ್ತದಾನ ಶಿಬಿರ ನಡೆಯಿತು.

ಕಾರ್ಯಕ್ರಮದ ಅದ್ಯಕ್ಶತೆಯನ್ನು ಉಪ್ಪಿನಂಗಡಿ ಬ್ಲಾಕ್ ಸಮಿತಿಯ ಅಧ್ಯಕ್ಷರಾದ ಮುಸ್ತಫಾ ಲತೀಫಿ ವಹಿಸಿದ್ದರು. Sdpi ದ.ಕ ಜಿಲ್ಲಾ ಪ್ರಧಾನ ಕಾರ್ಯದರ್ಶಿ ಅನ್ವರ್ ಸಾದತ್ ಬಜತ್ತೂರು ಉದ್ಘಾಟನಾ ಭಾಷಣ ಮಾಡಿದರು.

ರೋಟರಿ ಕ್ಯಾಂಪ್ಕೋ ರಕ್ತ ನಿಧಿಯ ಮುಖ್ಯ ಕಾರ್ಯನಿರ್ವಾಹಣ ಅಧಿಕಾರಿ ಡಾ.ರಾಮಕೃಷ್ಣ ಭಟ್ ಮಾತನಾಡಿ ರಕ್ತ ನೀಡುವುದರ ಬಗ್ಗೆ ವಿಸ್ತಾರವಾಗಿ ವಿವರಿಸಿದರು.
ಅತಿಥಿಯಾಗಿ ಆಗಮಿಸಿದ SDPI ಪುತ್ತೂರು ವಿಧಾನಸಭಾ ಕ್ಷೇತ್ರ ಸಮಿತಿಯ ಅಧ್ಯಕ್ಷರಾದ ಹಾಜಿ ಇಬ್ರಾಹಿಂ ಸಾಗರ್ ಅವರು ಪಕ್ಷ ಆಯೋಜಿಸಿದ ಬ್ಲಡ್ ಕಾರ್ಯಕ್ರಮದ ಬಗ್ಗೆ ಮಾತನಾಡಿದರು. ಉಪ್ಪಿನಂಗಡಿ ಗ್ರಾಮ ಪಂಚಾಯತ್ ಸದಸ್ಯ ರಶೀದ್ ಮಠ ಸ್ವಾಗತಿಸಿದರು. ಎಸ್.ಡಿ.ಪಿ.ಐ ಉಪ್ಪಿನಂಗಡಿ ಬ್ಲಾಕ್ ನ
ಪ್ರಧಾನ ಕಾರ್ಯದರ್ಶಿ ಶರೀಫ್ ಬೆದ್ರೋಡಿ ಧನ್ಯವಾದಗೈದರು.