ಪುತ್ತೂರು: ಪ್ರಯಾಣಿಕರ ಅನೂಕೂಲಕ್ಕಾಗಿ
ಬೆಂಗಳೂರಿಗೆ ಅಂಬಾರಿ ಉತ್ಸವ್ ಬಸ್ ಸೇವೆ ಆರಂಭ
ಪುತ್ತೂರು: ಪ್ರಯಾಣಿಕರ ಬಹುಕಾಲದ ಬೇಡಿಕೆಯೊಂದು ಈ ಬಾರಿ ಈಡೇರಿದೆ. ಪುತ್ತೂರಿನಿಂದ ಬೆಂಗಳೂರಿಗೆ ತೆರಳುವ ಪ್ರಯಾಣಿಕರಿಗೆ ಕರ್ನಾಟಕ ಸರಕಾರ ಸಾರಿಗೆ ಇಲಾಖೆಯ ವತಿಯಿಂದ ಅಂಬಾರಿ ಉತ್ಸವ್ ಬಸ್ ಜು.27 ರಿಂದ ಸಂಚಾರ ಆರಂಭ ಮಾಡಿದೆ.

ಮಂಗಳೂರಿನಿಂದ ಹೊರಡುವ ಬಸ್ಸು ಪುತ್ತೂರಿಗೆ ಪ್ರತೀ ದಿನ ರಾತ್ರಿ 10.30 ಕ್ಕೆ ತಲುಪುತ್ತದೆ. ಪುತ್ತೂರು,ಸುಳ್ಯ,ಮಡಿಕೇರಿ,ಮೈಸೂರು ಮಾರ್ಗವಾಗಿ ಬೆಂಗಳೂರಿಗೆ ಸಂಚರಿಸುತ್ತದೆ. ಪೂರ್ತಿ ಸ್ಲೀಪರ್ ಕೋಚ್ ಬಸ್ ಇದಾಗಿದ್ದು ಈ ಸೌಲಭ್ಯಧಿಂದ ಪುತ್ತೂರು ಭಾಗದ ಪ್ರಯಾಣಿಕರು ವಂಚಿತರಾಗಿದ್ದರು. ಅಂಬಾರಿ ಉತ್ಸವ್ ಬಸ್ ಆರಂಭ ಮಾಡುವಂತೆ ಶಾಸಕ ಅಶೋಕ್ ರೈ ಅವರಿಗೆ ಸಾರ್ವಜನಿಕರು ಮನವಿ ಮಾಡಿದ್ದರು.
ಅಂಬಾರಿ ಉತ್ಸವ್ ಬಸ್ ಸೌಲಭ್ಯಕ್ಕಾಗಿ ಸಾರ್ವಜನಿಕರಿಂದ ಮನವಿ ಬಂದಿತ್ತು. ಈ ವಿಚಾರದ ಬಗ್ಗೆ ಕೆಎಸ್ಆರ್ಟಿಸಿ ಅಧಿಕಾರಿಗಳ ಜೊತೆ ಚರ್ಚಿಸಿ ಪುತ್ತೂರು ಸುಳ್ಯ ಮಾರ್ಗವಾಗಿ ಬೆಂಗಳೂರಿಗೆ ಈ ಬಸ್ಸಿನ ವ್ಯವಸ್ಥೆ ಮಾಡಲಾಗಿದೆ.ಪ್ರಯಾಣಿಕರು ಇದರ ಪ್ರಯೋಜನವನ್ನು ಪಡೆದುಕೊಳ್ಳಬೇಕೆಂದು ಶಾಸಕ ಅಶೋಕ್ ರೈ ತಿಳಿಸಿದ್ದಾರೆ.