ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟವಾಗಿಲ್ಲ: ಕಾಂಗ್ರೆಸ್
ಪಶ್ಚಿಮ ಬಂಗಾಳದಲ್ಲಿ ಮಾಲ್ಡಾದಲ್ಲಿ ಭಾರತ್ ಜೋಡೋ ನ್ಯಾಯ ಯಾತ್ರೆಯ ವೇಳೆ ರಾಹುಲ್ ಗಾಂಧಿ ಕಾರಿನ ಮೇಲೆ ಕಲ್ಲು ತೂರಾಟವಾಗಿಲ್ಲ ಎಂದು ಕಾಂಗ್ರೆಸ್ ಸ್ಪಷ್ಟನೆ ನೀಡಿದೆ.
ಈ ಬಗ್ಗೆ ಎಕ್ಸ್ ನಲ್ಲಿ ಪೋಸ್ಟ್ ಹಂಚಿಕೊಂಡಿರುವ ಕಾಂಗ್ರೆಸ್, ಪಶ್ಚಿಮ ಬಂಗಾಳದ ಮಾಲ್ಡಾದಲ್ಲಿ ರಾಹುಲ್ ಗಾಂಧಿ ಅವರನ್ನು ಭೇಟಿಯಾಗಲು ಅಪಾರ ಜನಸ್ತೋಮವೇ ಆಗಮಿಸಿತ್ತು. ಈ ಗುಂಪಿನಲ್ಲಿ, ಮಹಿಳೆಯೊಬ್ಬರು ರಾಹುಲ್ ಅವರನ್ನು ಭೇಟಿಯಾಗಲು ಅವರ ಕಾರಿನ ಮುಂದೆ ಒಮ್ಮೆಲೇ ಬಂದರು. ಇದರಿಂದಾಗಿ ಇದ್ದಕ್ಕಿದ್ದಂತೆ ಬ್ರೇಕ್ ಹಾಕಲಾಯಿತು. ಆಗ ಸೆಕ್ಯೂರಿಟಿ ಸರ್ಕಲ್ ನಲ್ಲಿ ಬಳಸಿದ ಹಗ್ಗದಿಂದ ಕಾರಿನ ಗಾಜು ಒಡೆದಿದೆ. ರಾಹುಲ್ ಗಾಂಧಿ ಜನರಿಗೆ ಆಗುತ್ತಿರುವ ಅನ್ಯಾಯದ ವಿರುದ್ಧ ನ್ಯಾಯಕ್ಕಾಗಿ ಹೋರಾಟ ನಡೆಸುತ್ತಿದ್ದಾರೆ. ಸಾರ್ವಜನಿಕರು ಅವರೊಂದಿಗಿದ್ದಾರೆ. ಜನರು ಅವರ ಬಗ್ಗೆ ಕಾಳಜಿ ವಹಿಸುತ್ತಾರೆ ಎಂದು ಪೋಸ್ಟ್ ಮಾಡಿದೆ. ಆ ಮೂಲಕ ಗೊಂದಲಕ್ಕೆ ತೆರೆ ಎಳೆದಿದೆ.