ಸುಬ್ರಹ್ಮಣ್ಯ: ಅಪರಿಚಿತ ವ್ಯಕ್ತಿ ನೇಣು ಬಿಗಿದು ಆತ್ಮಹತ್ಯೆ
ಶ್ರೀ ಕುಕ್ಕೆ ಸುಬ್ರಹ್ಮಣ್ಯದ ಸವಾರಿ ಮಂಟಪ ಬಳಿಯ ಕಾಡಿನಲ್ಲಿ ಅಪರಿಚಿತ ವ್ಯಕ್ತಿಯೊರ್ವ ನೇಣು ಬಿಗಿದು ಆತ್ಮಹತ್ಯೆ ಮಾಡಿದ ಘಟನೆ ಇಂದು ಮುಂಜಾನೆ ವರದಿಯಾಗಿದೆ.

ಅಂದಾಜು 55 ವರ್ಷ ವಯಸ್ಸಾಗಿರುವ ವ್ಯಕ್ತಿಯ ಮೃತ ದೇಹ ಮರದಲ್ಲಿ ನೇತಾಡುವ ಸ್ಥಿತಿಯಲ್ಲಿ ಕಂಡು ಬಂದಿದ್ದು ವ್ಯಕ್ತಿಯ ಗುರುತು ಪತ್ತೆಯಾಗಿಲ್ಲ.
ಹೆಚ್ಚಿನ ಮಾಹಿತಿಗಾಗಿ ಸುಬ್ರಹ್ಮಣ್ಯ ಠಾಣೆಯನ್ನು ಸಂಪರ್ಕಿಸುವಂತೆ ಕೋರಲಾಗಿದೆ. ಸ್ಥಳೀಯರಾದ ದೀಪಕ್ ನಂಬಿಯಾರ್ ಮತ್ತಿತರರು ಸೇರಿ ಮೃತ ದೇಹವನ್ನು ಕೆಳಗಿಳಿಸಲಾಗಿದೆ ಎಂದು ತಿಳಿದುಬಂದಿದೆ.