ಹತ್ಯೆಗೀಡಾದ ಕಳಂಜದ ಮಸೂದ್ ಕುಟುಂಬಕ್ಕೆ ಮುಸ್ಲಿಂ ಸೆಂಟ್ರಲ್ ಕಮಿಟಿ ಮತ್ತು ಸುಳ್ಯ ತಾಲೂಕು ಜಮಾಅತ್ ಸಮಿತಿ ವತಿಯಿಂದ ನಿರ್ಮಿಸಿದ ಮನೆ ಹಸ್ತಾಂತರ
ಕಳೆದ ಜುಲೈನಲ್ಲಿ ಸುಳ್ಯ ತಾಲೂಕಿನ ಕಳಂಜ ಎಂಬಲ್ಲಿ ಹತ್ಯೆಗೀಡಾದ ಮಸೂದ್ ಕುಟುಂಬಕ್ಕೆ ಅನೇಕ ದಾನಿಗಳು, ಸಂಘ ಟನೆಗಳು,ರಾಜಕೀಯ ನಾಯಕರುಗಳು ಭೇಟಿ ನೀಡಿ ಸಾಂತ್ವನ ಮತ್ತು ಸಹಾಯ ಹಸ್ತವನ್ನು ನೀಡಿದ್ದರು.

ಈ ಪೈಕಿ ದ.ಕ. ಮತ್ತು ಉಡುಪಿ ಜಿಲ್ಲೆ ಮುಸ್ಲಿಂ ಸೆಂಟ್ರಲ್ ಕಮಿಟಿ ಅಧ್ಯಕ್ಷರಾದ ಹಾಜಿ ಕೆಎಸ್ ಮಹಮ್ಮದ್ ಮಸೂದ್ ರವರು ಸೆಂಟ್ರಲ್ ಕಮಿಟಿಯಿಂದ ನೀಡಿದ ರೂ 30 ಲಕ್ಷ, ತಾಲೂಕು ಜಮಾಅತ್ ಮತ್ತು ದಾನಿಗಳು ನೀಡಲಾದ ಮೊತ್ತದಲ್ಲಿ ಬೆಳ್ಳಾರೆಯಲ್ಲಿ ಮಸೂದ್ ಕುಟುಂಬಕ್ಕೆ ಮನೆ ಹಾಗೂ ಉಳಿಕೆ ಮೊತ್ತದಲ್ಲಿ ಮಸೂದ್ ಸಹೋದರಿಯ ಮದುವೆಗೆ ಚಿನ್ನಾಭರಣ ನೀಡುವ ಯೋಜನೆ ರೂಪಿಸಲಾಗಿತ್ತು. ಅದೀಗ ಪೂರ್ಣಗೊಂಡು ಇಂದು ಬೆಳ್ಳಾರೆಯಲ್ಲಿ ಮಸೂದ್ ಕುಟುಂಬಕ್ಕೆ ಹಸ್ತಾಂತರ ಮಾಡಲಾಯಿತು.
ದ.ಕ. ಮತ್ತು ಉಡುಪಿ ಜಿಲ್ಲಾ ಸೆಂಟ್ರಲ್ ಕಮಿಟಿ ಅಧ್ಯಕ್ಷ ಕೆ. ಎಸ್. ಮಹಮ್ಮದ್ ಮಸೂದ್ ಹಸ್ತಾಂತರ ಕಾರ್ಯಕ್ರಮವನ್ನು ನೆರವೇರಿಸಿ ಮಾತನಾಡಿ ಮನೆ ಇಲ್ಲದೆ ಕೂಲಿ ಕೆಲಸ ಮಾಡಿಕೊಂಡು ಜೀವನ ನಡೆಸುತ್ತಿದ್ದ ಈ ನಿರ್ಗತಿಕ ಕುಟುಂಬ ಸಂಕಷ್ಟ ದಲ್ಲಿದ್ದಾಗ ಜಾತಿ ಮತ ಭೇದ ಇಲ್ಲದೆ ನೆರವಿಗೆ ಧಾವಿಸಿ ಸಾಂತ್ವನ ಹೇಳಿ ಸಹಾಯ ಮಾಡಿ ಮಾನವೀಯತೆ ಮೆರೆದ ಎಲ್ಲರಿಗೂ ನಮ್ಮ ಅಭಿನಂದನೆಗಳು.ಎಲ್ಲರೂ ಪ್ರೀತಿ, ವಿಶ್ವಾಸದಿಂದ ಪರಸ್ಪರ ಸೌಹಾರ್ದತೆಯಿಂದ ದೇಶದ ಜಾತ್ಯತೀತ ಮೌಲ್ಯದ ಸೌಂದರ್ಯ ವರ್ದಿಸಲು ಕಾರಣಕರ್ತರಾಗೋಣ ಎಂದು ಹೇಳಿದರು.

ಈ ಸಂದರ್ಭದಲ್ಲಿ ಮುಸ್ಲಿಂ ಸೆಂಟ್ರಲ್ ಕಮಿಟಿಯ ಉಪಾಧ್ಯಕ್ಷರುಗಳಾದ ಮಾಜಿ ಮೇಯರ್ ಅಶ್ರಫ್,ಪುತ್ತುಬಾವ ಹಾಜಿ, ಹಾಜಿ ಕೆ. ಪಿ. ಅಹ್ಮದ್ಆಕರ್ಷನ್ ಪುತ್ತೂರು, ಸಂಘಟನಾ ಕಾರ್ಯದರ್ಶಿಗಳಾದ ಎಸ್. ಸಂಶುದ್ದೀನ್ ಸುಳ್ಯ,ಅಬ್ದುಲ್ ರೆಹಮಾನ್ ಆಜಾದ್,ಕಾರ್ಯದರ್ಶಿ ಕಾನೂನು ಸಲಹೆಗಾರ ನೂರುದ್ದೀನ್ ಸಾಲ್ಮರ,ಕೆಪಿಸಿಸಿ ಮಾಧ್ಯಮ ವಕ್ತಾರ ಟಿ. ಎಂ ಶಹೀದ್,ಕೆಪಿಸಿಸಿ ಅಲ್ಪಸಂಖ್ಯಾತರ ವಿಭಾಗದ ಪ್ರಧಾನ ಕಾರ್ಯದರ್ಶಿ ಕೆ. ಎಂ ಮುಸ್ತಾಫ ಜನತಾ,ಜೆ ಡಿ ಎಸ್ ರಾಜ್ಯ ಕಾರ್ಯದರ್ಶಿ ಮಹಮ್ಮದ್ ಇಕ್ಬಾಲ್ ಎಲಿಮಲೆ, ಎಐಕೆಎಂಸಿಸಿ ದ. ಕ. ಜಿಲ್ಲಾ ಖಜಾಂಚಿ ಹಾಜಿ ಇಬ್ರಾಹಿಂ ಕತ್ತರ್ ಮಂಡೆಕೋಲು,ಜಾವಗಲ್ ಶರೀಫ್ ಮ್ಯಾನೇಜಿಂಗ್ ಟ್ರಸ್ಟಿ ಹಾಜಿ ಇಸಾಕ್ ಸಾಹೇಬ್ ಪಾಜಪಳ್ಳ , ಗ್ರೀನ್ ವ್ಯೂ ಶಿಕ್ಷಣ ಸಂಸ್ಥೆ ಮಾಜಿ ಅಧ್ಯಕ್ಷ ಪಿ. ಎ. ಮಹಮ್ಮದ್,ತಾಲೂಕು ಪಂಚಾಯಿತಿ ಮಾಜಿ ಸದಸ್ಯ ಅಬ್ದುಲ್ ಗಫೂರ್, ಕಲ್ಮಡ್ಕ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಶ್ರೀಮತಿ ಹಾಜಿರ,ಸಂಪಾಜೆ ಗ್ರಾಮ ಪಂಚಾಯತ್ ಅಧ್ಯಕ್ಷ ಹಮೀದ್ ಜಿ. ಕೆ ಸುಳ್ಳ ಅಲ್ಪಸಂಖ್ಯಾತರ ಸಹಕಾರಿ ಸಂಘದ ಮಾಜಿ ಅಧ್ಯಕ್ಷ ಇಸ್ಮಾಯಿಲ್ ಪಡ್ಪಿನಂಗಡಿ, ಜಾಲ್ಸುರು ಗ್ರಾಮ ಪಂಚಾಯತ್ ಮಾಜಿ ಅಧ್ಯಕ್ಷ ಮಜೀದ್ ನಡುವಡ್ಕ, ಅಡ್ವಕೇಟ್ ಮೂಸಾ ಪೈoಬಚ್ಚಾಲ್, ಜಾಲ್ಸೂರು ಮಸೀದಿ ಅಧ್ಯಕ್ಷ ಉಸ್ಮಾನ್ ಜಿ. ಎಂ ಮೊಗರ್ಪಣೆ ಮಸೀದಿ ಅಧ್ಯಕ್ಷ ಹಾಜಿ ಇಬ್ರಾಹಿಂ ಸೀ ಫುಡ್,ಬೆಳ್ಳಾ ರೆ ಗ್ರಾಮ ಪಂಚಾಯತ್ ಮಾಜಿ ಉಪಾಧ್ಯಕ್ಷ ಮುಸ್ತಫಾ ಕಲ್ಪಣೆ, ಅನ್ಸಾರಿಯಾ ಎಜುಕೇಶನ್ ಟ್ರಸ್ಟ್ ನಿರ್ದೇಶಕ ಶಾಫಿ ಕುತ್ತಾಮೊಟ್ಟೆ,ಉದ್ಯಮಿಗಳಾದ ಸಿದ್ದೀಕ್ ಕೊಕೊ, ಹಾಜಿ ಮೂಸ ಕಲ್ಪಣೆ, ಮತ್ತು ಮಸೂದ್ ಕಳಂಜ ಕುಟುಂಬಸ್ಥರು ಉಪಸ್ಥಿತರಿದ್ದರು.



