ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಾಂಧೀ ಜಯಂತಿ ಆಚರಣೆ
ಪುತ್ತೂರು: ಮೇನಾಲ ಮಧುರಾ ಇಂಟರ್ ನ್ಯಾಷನಲ್ ಸ್ಕೂಲ್ ನಲ್ಲಿ ಗಾಂಧೀ ಜಯಂತಿ ಆಚರಿಸಲಾಯಿತು.
ಸಂಸ್ಥೆಯ ಮುಖ್ಯಶಿಕ್ಷಕಿ ರಮ್ಲತ್.ಕೆ
ಗಾಂಧೀಜಿಯವರ ಜೀವನ ಶೈಲಿಯ ಕುರಿತು ಸಂಕ್ಷಿಪ್ತವಾಗಿ ವಿವರಿಸಿದರು.

ಶಿಕ್ಷಕ ವೃಂದದವರು ಗಾಂಧೀ ಜಯಂತಿಯ ಕುರಿತು ಮಾತನಾಡಿದರು.ಶಿಕ್ಷಕಿ ಪ್ರತೀಕ್ಷಾ ಸ್ವಾಗತಿಸಿ, ಶಿಕ್ಷಕಿ ರಾಬಿಯಾ ವಂದಿಸಿದರು. ಶಿಕ್ಷಕಿ ಶೈಖ್ ಝಹೀರಾ ಬಾನು ಕಾರ್ಯಕ್ರಮ ನಿರೂಪಿಸಿದರು.
ಶಿಕ್ಷಕೇತರ ವೃಂದದವರು ಸಹಕರಿಸಿದರು.