ನವರಾತ್ರಿ ವೇಷ ಹಾಕದಿದ್ರೆ ಅನಾರೋಗ್ಯ ಕಾಡುತ್ತದೆ: ಪ್ರೇತ ವೇಷಧಾರಿ ಪುತ್ತೂರಿನ ಆಟೋ ಚಾಲಕ
ಪುತ್ತೂರು: ದಿವಾಕರ ದೇವಾಡಿಗ, ಪುತ್ತೂರಿನಲ್ಲಿ ಆಟೋ ಚಾಲಕರಾಗಿ ದುಡಿಯುತ್ತಿದ್ದಾರೆ. ಸುಮಾರು ೧೦ ವರ್ಷಗಳ ಹಿಂದೆ ಇವರು ದೇವರುಗಳ ವೆಷ ಹಾಕಿ ನವರಾತ್ರಿ ದಿನಗಳಲ್ಲಿ ಮನರಂಜಿಸುತ್ತಿದ್ದರು. ಆ ಬಳಿಕ ಒಂದು ವರ್ಷ ವೇಷ ಹಾಕಲಿಲ್ಲ. ಆವರ್ಷದಲ್ಲಿಅವರಿಗೆ ಅನಾರೋಗ್ಯ ಕಾಡಿತ್ತು. ಕೈಕಾಲು ಕೊಚ್ಚೆ ಕಟ್ಟಿ ನಡೆದಾಡಲು ಸಾಧ್ಯವಾಗದ ಪರಿಸ್ಥಿತಿ ನಿರ್ಮಾಣವಾಗಿತ್ತು. ಆ ವೇಳೆ ಅವರು ಮುಂದಿನ ಪ್ರತೀ ವರ್ಷ ಪ್ರೇತದ ವೇಷ ಹಾಕುವುದಾಗಿ ಹರಕೆ ಹೇಳಿದ್ದರು. ಆ ಬಳಿಕ ಇವರು ನವರಾತ್ರಿ ದಿನದಲ್ಲಿ ಮೂರು ದಿನ ಪ್ರೇತದಾರಿಯಾಗಿ ಪುತ್ತೂರು ನಗರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ.
ಇವರು ದುಡ್ಡಿಗೋಸ್ಕರ ವೇಷ ಹಾಕುತ್ತಿಲ್ಲ . ಹರಕೆಯನ್ನು ತೀರಿಸಲು ಈ ಕಾರ್ಯ ಮಾಡುತ್ತಿದ್ದಾರೆ. ಆದರೂ ಕೆಲವರು ಇವರಿಗೆ ಹಣ ನೀಡುತ್ತಿದ್ದಾರೆ. ಪುತ್ತೂರು ನಗರದಲ್ಲಿ ದಿವಾಕರರವರ ಪ್ರೇತ ಬಂತೆಂದರೆ ಸಾಕು ಅಲ್ಲೊಂದಿಷ್ಟು ಜನ ಸೇರುತ್ತಾರೆ. ಅವರು ಮಾಡುವ ಮನರಂಜನೆಯನ್ನು ಕಂಡು ಖುಷಿ ಪಡುತ್ತಾರೆ. ಜನರು ಖುಷಿ ಪಡುವುದೇ ದಿವಾಕರ ಅವರಿಗೆ ನೀಡುವ ಬೆಂಬಲವಾಗಿದೆ.