ಸುಳ್ಯ: ಪೇರಡ್ಕ ಉರೂಸ್ ಸಮಾರಂಭಕ್ಕೆ ಚಾಲನೆ; ಖ್ಯಾತ ವಾಗ್ಮಿ ಸಲೀಂ ವಾಫಿಯವರಿಗೆ ಸನ್ಮಾನ
ಸುಳ್ಯ ತಾಲೂಕು ಪೇರಡ್ಕ ದರ್ಗಾ ಶರೀಫ್ ನಲ್ಲಿ ವರ್ಷಂ ಪ್ರತಿ ಆಚರಿಸಿಕೊಂಡು ಬರುವ ಉರೂಸ್ ಸಮಾರಂಭಕ್ಕೆ ಫೆಬ್ರವರಿ 17ರಂದು ಚಾಲನೆ ನೀಡಲಾಯಿತು.

ಉರೂಸ್ ಕಾರ್ಯಕ್ರಮದ ಅಂಗವಾಗಿ ಸೌಹಾರ್ದ ಸಮಾವೇಶವನ್ನು ಹಮ್ಮಿಕೊಳ್ಳಲಾಗಿತ್ತು. ಬಳಿಕ ನಡೆದ ಧಾರ್ಮಿಕ ಪ್ರಭಾಷಣ ಕಾರ್ಯಕ್ರಮವನ್ನು ಪೇರಡ್ಕ ಎಂ.ಜೆ.ಎಂ ಖತೀಬರಾದ ರಿಯಾಝ್ ಫೈಝಿ ಉದ್ಘಾಟಿಸಿದರು.
ಅಂತರಾಷ್ಟ್ರೀಯ ಮಟ್ಟದಲ್ಲಿ ಖ್ಯಾತಿಯನ್ನು ಪಡೆದಿರುವ ವಾಗ್ಮಿ ಸಲೀಂ ವಾಫಿ ಅಂಬಲಕಂಡಿರವರಿಂದ ಮುಖ್ಯ ಪ್ರಭಾಷಣ ನಡೆಯಿತು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಉರೂಸ್ ಸಮಿತಿ ಸ್ಥಾಪಕ ಅಧ್ಯಕ್ಷ ಟಿ ಎಮ್ ಶಹೀದ್ ವಹಿಸಿದ್ದರು. ವೇದಿಕೆಯಲ್ಲಿ ಪೇರಡ್ಕ ಎಂ.ಜೆ.ಎಂ.ಅಧ್ಯಕ್ಷ ಎಸ್.ಆಲಿ ಹಾಜಿ,ಕಲ್ಲುಗುಂಡಿ ಎಂ.ಜೆ.ಎಂ.ಖತೀಬರಾದ ನಈಮ್ ಫೈಝಿ, ಉರೂಸ್ ಸಮಿತಿ ಅಧ್ಯಕ್ಷ ಟಿ.ಎಂ.ಶಹೀದ್ ತೆಕ್ಕಿಲ್, ಹಮೀದ್ ಬೀಜಕೊಚ್ಚಿ, ಉನೈಸ್ ಪೆರಾಜೆ, ಟಿ.ಇ.ಆರಿಫ್ ತೆಕ್ಕಿಲ್, ಪಾಂಡಿ ಅಬ್ಬಾಸ್, ಹಸೈನಾರ್ ಚಟ್ಟೆಕಲ್ಲು, ಟಿ.ಎ.ಮಹಮ್ಮದ್ ಕುಂಞಿ ತೆಕ್ಕಿಲ್ ಪೇರಡ್ಕ, ಮಸೀದಿ ನವೀಕರಣ ಸಮಿತಿ ಪ್ರಧಾನ ಕಾರ್ಯದರ್ಶಿ ಅಬ್ದುಲ್ ರಝಾಕ್ ಹಾಜಿ ಟಿ.ಎಂ.,ಅಬ್ದುಲ್ ಖಾದರ್ ಮೊಟ್ಟೆಂಗಾರ್, ಪೇರಡ್ಕ ಎಂ.ಆರ್.ಡಿ.ಎ. ಅಧ್ಯಕ್ಷ ಜಾಕೀರ್ ಹುಸೈನ್, ಎಸ್.ಕೆ.ಎಸ್.ಎಸ್.ಎಫ್. ಅಧ್ಯಕ್ಷ ಸಾಜಿದ್ ಅಝ್ಹರಿ ಮತ್ತಿತರರು ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ಮುಖ್ಯಪ್ರಭಾಷಣಕಾರ ಸಲೀಂ ವಾಫಿರವರನ್ನು ಸಮಿತಿ ವತಿಯಿಂದ ಸನ್ಮಾನಿಸಿ ಗೌರವಿಸಲಾಯಿತು.ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಹಾರಿಸ್ ಬೆಂಗಳೂರು,ಸಂಪಾಜೆ ಗ್ರಾ.ಪಂ.ಅಧ್ಯಕ್ಷ ಹಾಗು ಉರೂಸ್ ಸಮಿತಿ ಕಾರ್ಯದರ್ಶಿ ಜಿ.ಕೆ. ಹಮೀದ್ ಮೊದಲಾದವರು ಉಪಸ್ಥಿತರಿದ್ದರು.
ಉರೂಸ್ ಸಮಾರಂಭವು ಫೆಬ್ರವರಿ 19 ಸಮಾರೋಪ ಸಮಾರಂಭ ಗೊಳ್ಳಲಿದೆ.