ಅಂತಾರಾಷ್ಟ್ರೀಯ

ಗಾಝಾ: ಹಸಿವಿನಿಂದ 21 ಮಕ್ಕಳು ಮೃತ್ಯು

ಗಾಝಾ: ಗಾಝಾ ಪಟ್ಟಿಯಾದ್ಯಂತ ಕಳೆದ 72 ಗಂಟೆಗಳಲ್ಲಿ 21 ಮಕ್ಕಳು ಹಸಿವೆ ಹಾಗೂ ಅಪೌಷ್ಟಿಕತೆಯಿಂದ ಸಾವನ್ನಪ್ಪಿರುವುದಾಗಿ ವರದಿಯಾಗಿದೆ.

ಗಾಝಾ ನಗರದ ಅಲ್-ಶಿಫಾ ಆಸ್ಪತ್ರೆ, ದೀರ್ ಅಲ್ -ಬಲಾಪ್‌ನಲ್ಲಿರುವ ಅಖ್ಯಾ ಆಸ್ಪತ್ರೆ ಹಾಗೂ ಖಾನ್ ಯೂನಿಸ್ ನಗರದಲ್ಲಿರುವ ನಾಸಿರ್ ಆಸ್ಪತ್ರೆಗಳಲ್ಲಿ ಈ ಸಾವುಗಳು ಸಂಭವಿಸಿವೆ. ಆಹಾರ ಮತ್ತು ವೈದ್ಯಕೀಯ ಸರಬರಾಜು ಕೊರತೆಗಳ ಮಧ್ಯೆ ತೀವ್ರ ಅಪೌಷ್ಟಿಕತೆ ಮತ್ತು ಹಸಿವು ಸಂಬಂಧಿತ ತೊಡಕುಗಳಿಂದ ಮಕ್ಕಳ ಸಾವು ನೋವಿನ ಪ್ರಮಾಣ ಹೆಚ್ಚಿದೆ ಎಂದು ವರದಿಯಾಗಿದೆ.

Leave a Reply

Your email address will not be published. Required fields are marked *

error: Content is protected !!