ಕರಾವಳಿ

ಯೋಧರೊಂದಿಗೆ ದೀಪಾವಳಿ ಆಚರಿಸಿಕೊಂಡ ಸಂಸದ ಕ್ಯಾ. ಬ್ರಿಜೇಶ್ ಚೌಟ

ಮಂಗಳೂರು: ದ.ಕ ಸಂಸದ ಕ್ಯಾ. ಬ್ರಿಜೇಶ್ ಚೌಟ ಅವರು ಕರಾವಳಿ ಭದ್ರತಾ ಪಡೆಯ ಸೈನಿಕರೊಂದಿಗೆ ದೀಪಾವಳಿಯನ್ನು ಆಚರಿಸಿಕೊಂಡಿದ್ದಾರೆ.

ಶುಕ್ರವಾರ ಸಂಜೆ ಪಣಂಬೂರಿನಲ್ಲಿರುವ ಕರಾವಳಿ ಭದ್ರತಾ ಪಡೆಯ ಮಂಗಳೂರು ಘಟಕಕ್ಕೆ ಭೇಟಿ ನೀಡಿದ್ದ ಚೌಟ ಅವರು ಅಲ್ಲಿ ಯೋಧರೊಂದಿಗೆ ಸಿಹಿ ಹಂಚಿಕೊಂಡು ಜವಾನರೊಂದಿಗೆ ಉಭಯ ಕುಶಲೋಪರಿ ನಡೆಸುವ ಮೂಲಕ ದೀಪಾವಳಿಯನ್ನು ಅರ್ಥಪೂರ್ಣವಾಗಿ ಆಚರಿಸಿಕೊಂಡರು.

ಆ ಬಳಿಕ ಮಾತನಾಡಿದ ಸಂಸದರು ತಮ್ಮ ಜೀವದ ಹಂಗನ್ನು ತೊರೆದು ದಿನದ 24 ಗಂಟೆಯೂ ತಾಯಿ ಭಾರತಾಂಬೆಯ ರಕ್ಷಣೆಯಲ್ಲಿ ತೊಡಗಿರುವ ಯೋಧರೊಂದಿಗೆ ಕಾಲ ಕಳೆದಿರುವುದು, ನನ್ನ ಸೇನಾ ದಿನಗಳನ್ನು ನೆನಪಿಸಿದ್ದು ಮಾತ್ರವಲ್ಲದೆ ನನ್ನ ಪಾಲಿಗೆ ಭಾವನಾತ್ಮಕವಾಗಿತ್ತು ಎಂದರು. ಪ್ರಧಾನ ಮಂತ್ರಿ ನರೇಂದ್ರ ಮೋದಿಯವರು 2014ರಲ್ಲಿ ದೇಶದ ಪ್ರಧಾನಿಯಾದ ಬಳಿಕ ಪ್ರತಿ ವರ್ಷವೂ ದೀಪಾವಳಿಯನ್ನು ಗಡಿ ಕಾಯುವ ಯೋಧರೊಂದಿಗೆ ಆಚರಿಸಿಕೊಳ್ಳುತ್ತಿದ್ದಾರೆ. ಆ ಮೂಲಕ ಲಕ್ಷಾಂತರ ನಮ್ಮ ಸೇನಾ ಕುಟುಂಬಕ್ಕೆ ಸ್ಪೂರ್ತಿ ತುಂಬುತ್ತಿದ್ದಾರೆ. ಹೀಗಾಗಿ ನಾನು ಕೂಡಾ ಸಂಸದನಾಗಿ ಮೊದಲ ದೀಪಾವಳಿಯನ್ನು ನಮ್ಮ ಕರಾವಳಿ ತೀರವನ್ನು ಹಗಲಿರುಳು ಕಾಯುತ್ತಿರುವ ನನ್ನ ಯೋಧ ಕುಟುಂಬದೊಂದಿಗೆ ಆಚರಿಸುವ ಅವಕಾಶ ಲಭಿಸಿರುವುದು ಸ್ಮರಣೀಯವಾಗಿಸಿದೆ ಎಂದು ಹೇಳಿದರು.

Leave a Reply

Your email address will not be published. Required fields are marked *

error: Content is protected !!