ಪುತ್ತೂರು| ಬಸ್ಸಿನಲ್ಲಿ ಯುವತಿಗೆ ಕಿರುಕುಳ ಆರೋಪ, ಯುವಕ ಪೊಲೀಸ್ ವಶಕ್ಕೆ
ಪುತ್ತೂರು: ಕಾಲೇಜು ಮುಗಿಸಿಕೊಂಡು ಸಂಜೆ ಮಂಗಳೂರಿನಿಂದ ಪುತ್ತೂರು ಬರುವ ಕೆ.ಎಸ್.ಆರ್.ಟಿಸಿ ಬಸ್ ನಲ್ಲಿ ಪ್ರಯಾಣಿಸುತ್ತಿದ್ದ ವಿದ್ಯಾರ್ಥಿನಿಯೋರ್ವಳಿಗೆ ಕಿರುಕುಳ ನೀಡಿ ಅನುಚಿತ ವರ್ತನೆ ತೋರಿದ ಆರೋಪದಲ್ಲಿ ಯುವಕನೊಬ್ಬನನ್ನು ಪುತ್ತೂರು ಪೊಲೀಸರು ವಶಕ್ಕೆ ಪಡೆದುಕೊಂಡ ಘಟನೆ ಜು.22ರಂದು ಸಂಜೆ ನಡೆದಿದೆ.

ಯುವತಿ ಬಳಿ ಕುಳಿತಿದ್ದ ಯುವಕ, ಬಸ್ ಮಾಣಿ ಬಳಿ ತಲುಪಿದಾಗ ಯುವತಿ ಜೊತೆ ಅನುಚಿತವಾಗಿ ವರ್ತಿಸಿದ್ದು .ಆ ವೇಳೆ ಯುವತಿ ಆತನಿಗೆ ಬೈದಿರುತ್ತಾರೆ ಎನ್ನಲಾಗಿದೆ. ಬಳಿಕ ಯುವತಿ ವಿಚಾರವನ್ನು ಅವರ ತಂದೆಗೆ ಪೋನ್ ಮುಖಾಂತರ ತಿಳಿಸಿದ್ದಾರೆ. ಬಳಿಕ ಬಸ್ ಪುತ್ತೂರು ಕೆಎಸ್‌ಅರ್‌ಟಿಸಿ ಬಸ್ ನಿಲ್ದಾಣಕ್ಕೆ ಬಂದಾಗ ಯುವಕ ಬಸ್ಸಿನ ತುರ್ತು ನಿರ್ಗಮನ ಕಿಟಕಿಯ ಮೂಲಕ ಹಾರಲು ಪ್ರಯತ್ನಿಸಿದ್ದು ಆಗ ಯುವತಿಯ ತಂದೆ ಮತ್ತು ಸಾರ್ವಜನಿಕರು ಹಿಡಿದುಕೊಂಡಿದ್ದಾರೆ. ಈ ವೇಳೆ ಸ್ಥಳದಲ್ಲಿ ಜನ ಜಮಾಯಿಸಿದ್ದು ಮಾತಿನ ಚಕಮಕಿ ಕೂಡಾ ನಡೆದಿದೆ ಎನ್ನಲಾಗಿದೆ. ಆರೋಪಿ ಯುವಕನನ್ನು ಮಂಗಳೂರಿನ ಮಹಮ್ಮದ್ ತೌಹೀದ್ ಎಂದು ತಿಳಿದು ಬಂದಿದೆ.
ಆರೊಪಿಯನ್ನು ಪೊಲೀಸರು ವಶಕ್ಕೆ ಪಡೆದಿದ್ದು ಯುವತಿ ನೀಡಿದ ದೂರಿನಂತೆ ಪುತ್ತೂರು ಮಹಿಳಾ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.