ಕರಾವಳಿಕ್ರೈಂ

ಯುವತಿಗೆ ಹಲ್ಲೆ ನಡೆಸಿ ಆತ್ಮಹತ್ಯೆಗೆ ಶರಣಾದ ಯುವಕ

ಬಂಟ್ವಾಳ: ಯುವಕನೋರ್ವ ಯುವತಿಗೆ ಹಲ್ಲೆ ನಡೆಸಿ ಬಳಿಕ ಯುವತಿಯ ಮನೆಯಲ್ಲಿ ಆತ್ಮಹತ್ಯೆಗೆ ಶರಣಾದ ಘಟನೆ ವರದಿಯಾಗಿದೆ.

ಫರಂಗಿಪೇಟೆಯ ಯುವತಿ ಹಾಗೂ  ಕೋಡ್ಮನ್ ಗ್ರಾಮ ನಿವಾಸಿ ಸುಧೀರ್  (30) ಎಂಬವರು ಸುಮಾರು 8 ವರ್ಷಗಳಿಂದ ಪರಸ್ಪರ ಪ್ರೀತಿಸುತ್ತಿದ್ದು, ಕಳೆದ ಕೆಲ ತಿಂಗಳುಗಳಿಂದ ಇವರಿಬ್ಬರ ಮಧ್ಯೆ ಮನಸ್ತಾಪ ಉಂಟಾಗಿತ್ತು ಎನ್ನಲಾಗಿದೆ. ಆದರೂ ಆರೋಪಿ ಸುಧೀರ್ ಫೋನ್ ಮಾಡುವುದು, ಹಿಂಬಾಲಿಸುವುದು, ಮಾಡುತ್ತಿದ್ದು, ಜು.7ರಂದು ಬೆಳಿಗ್ಗೆ ಫರಂಗಿಪೇಟೆ, ಸುಜೀರ್ ಮಲ್ಲಿ ಎಂಬಲ್ಲಿಗೆ ಬಂದು  ಯುವತಿಯೊಂದಿಗೆ  ಮದುವೆಯಾಗುವಂತೆ ಒತ್ತಾಯಿಸಿದ್ದು ಈ ವೇಳೆ  ಮಾತಿಗೆ ಮಾತು ಬೆಳೆಸಿ ಗಲಾಟೆ ನಡೆದಿದೆ. ಈ ವೇಳೆ ಆರೋಪಿ ಸುಧೀರ್ ತಾನು ತಂದಿದ್ದ ಚಾಕುವಿನಿಂದ ಯುವತಿಗೆ  ಚುಚ್ಚಿದ್ದು ಈ ವೇಳೆ ಆಕೆ ತಪ್ಪಿಸಿಕೊಂಡು ಹೋಗಿ ಬಿದ್ದಾಗ, ಆಕೆ ಮೃತಪಟ್ಟಿರಬಹುದೆಂದು ಭಾವಿಸಿ ಸುಧೀರ್ ಅಲ್ಲಿಂದ ಯುವತಿಯ  ಬಾಡಿಗೆ ಮನೆಗೆ ಹೋಗಿ, ಅಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾನೆ.

ಈ ಬಗ್ಗೆ ಬಂಟ್ವಾಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!