ಕುಂಬ್ರ ಮರ್ಕಝುಲ್ ಹುದಾದ ಸಾಧಕ ವಿದ್ಯಾರ್ಥಿನಿಗೆ 1 ಪವನ್ ಚಿನ್ನ: ಸುಲ್ತಾನ್ ಗೋಲ್ಡ್ ಕೊಡುಗೆ
ಪುತ್ತೂರು: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ವಾಣಿಜ್ಯ ವಿಭಾಗದಲ್ಲಿ ರಾಜ್ಯಕ್ಕೆ 9ನೇ ರ‍್ಯಾಂಕ್ ಗಳಿಸಿದ ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ವಿದ್ಯಾರ್ಥಿನಿಯೋರ್ವರಿಗೆ ಚಿನ್ನದ ಬಹುಮಾನ ಸಿಕ್ಕಿದೆ. ವಿದ್ಯಾರ್ಥಿನಿಯ ಸಾಧನೆಯನ್ನು ಗುರುತಿಸಿ ಪ್ರತಿಷ್ಟಿತ ಚಿನ್ನದ ಮಳಿಗೆ ಈ ಕೊಡುಗೆ ನೀಡಿ ಅಭಿನಂದಿಸಿದೆ. ಕುಂಬ್ರ ಮರ್ಕಝುಲ್ ಹುದಾ ಮಹಿಳಾ ಕಾಲೇಜಿನ ಹಾಸ್ಟೆಲ್ ವಿದ್ಯಾರ್ಥಿನಿ ಕೊಡಗಿನ ಕುಂಜಿಲ ಫರ್ಹತ್ ಎಂ.ಎ ಅವರನ್ನು ಸುಲ್ತಾನ್ ಡೈಮಂಡ್ ಗೋಲ್ಡ್ ವತಿಯಿಂದ ಒಂದು ಪವನ್ ಚಿನ್ನದ ನಾಣ್ಯವನ್ನು ನೀಡಿ ಗೌರವಿಸಲಾಯಿತು.

ಕುಂಬ್ರ ಮರ್ಕಝುಲ್ ಹುದಾದಲ್ಲಿ ನಡೆದ ಪ್ರತಿಭಾ ಪುರಸ್ಕಾರ ಸಮಾರಂಭದಲ್ಲಿ ಚಿನ್ನ ನೀಡಿ ಅಭಿನಂದಿಸಲಾಯಿತು.
ಸುಲ್ತಾನ್ ಗೋಲ್ಡ್ ಎಂಡ್ ಡೈಮಂಡ್ಸ್‌ನ ಮೆಹರುನ್ನೀಸಾ ಉಪಸ್ಥಿತರಿದ್ದರು. ಇದೇ ವೇಳೆ ಎಂಎಚ್‌ಕೆ ಸೌದಿ ರಾಷ್ಟ್ರೀಯ ಸಮಿತಿ ವತಿಯಿಂದ ಅಧ್ಯಕ್ಷರಾದ ಫಾರೂಕ್ ಹಾಜಿ ಕನ್ಯಾನ ಮತ್ತು ಎಂಎಚ್‌ಕೆ ಬಹರೈನ್ ಸಮಿತಿ ಅಧ್ಯಕ್ಷರಾದ ಜಮಾಲುದ್ದೀನ್ ವಿಟ್ಲ ತಮ್ಮ ಘಟಕಗಳ ವತಿಯಿಂದ ಫರ್ಹತ್ ಎಂ.ಎ ಮತ್ತು ಕಾಲೇಜು ಟಾಪರ್ಸ್‌ಗಳಾದ ಅಲೀಮತ್ ಸಈದಾ, ಅಶೀಮಾ ಇಶ್ರತ್, ನಫೀಸತ್ ಮುಫೀಸರವರಿಗೆ ಕ್ಯಾಶ್ ಅವಾರ್ಡ್ ನೀಡಿ ಗೌರವಿಸಿದರು. ಪದವಿಪೂರ್ವ ವಿಭಾಗದ ಉಪನ್ಯಾಸಕಿಯರು ಶಾಲು ಹೊದಿಸಿ ಫಲಕ ನೀಡಿ ಗೌರವಿಸಿದರು. ರ‍್ಯಾಂಕ್ ವಿಜೇತೆ ವಿದ್ಯಾರ್ಥಿನಿ ಫರ್ಹತ್ ಮಾತನಾಡಿ ಕೃತಜ್ಞತೆ ಸಲ್ಲಿಸಿದರು.