ಬೆಳ್ತಂಗಡಿ: ಉಜಿರೆಯಲ್ಲಿ ಲಾಡ್ಜ್ ಮೇಲೆ ಪೊಲೀಸರ ದಾಳಿ: 5 ಮಂದಿ ಯುವತಿಯರ ಸಹಿತ ಏಳು ಮಂದಿ ವಶಕ್ಕೆ
ಉಜಿರೆಯ ಎಂ.ಎಸ್.ಎಸ್ ಲಾಡ್ಜ್ ಮೇಲೆ ಮಾಹಿತಿ ಮೇರೆಗೆ ಬೆಳ್ತಂಗಡಿ ಪೊಲೀಸರು ದಾಳಿ ಮಾಡಿದ್ದು, 5 ಮಂದಿ ಮಹಿಳೆಯರು, ಇಬ್ಬರು ಪುರುಷರನ್ನು ಫೆ.7 ರಂದು ಸಂಜೆ ವಶಕ್ಕೆ ಪಡೆದಿದ್ದಾರೆ.

ಉಜಿರೆ ಚಾರ್ಮಾಡಿ ರಸ್ತೆಯಲ್ಲಿರುವ ಎಮ್.ಎಸ್.ಎಸ್. ಲಾಡ್ಜ್ ಮೇಲೆ ದಾಳಿ ವೇಳೆ ದಾಖಲೆಗಳಿಲ್ಲದೆ ರೂಂಗಳಲ್ಲಿ ಐದು ಮಂದಿ ಯುವತಿಯರನ್ನು ಮತ್ತು ಇಬ್ಬರು ಲಾಡ್ಜ್ ಸಿಬ್ಬಂದಿಯನ್ನು ಬೆಳ್ತಂಗಡಿ ಪೊಲೀಸರು ವಶಕ್ಕೆ ಪಡೆದಿದ್ದಾರೆ.