ಕರಾವಳಿ

ಮುಂಡೂರು: ಮನೆಯ ಮಾಡು ಕುಸಿದು ಅಪಾರ ನಷ್ಟ



ಪುತ್ತೂರು: ಮುಂಡೂರು ಗ್ರಾಮದ ಪೊನೋನಿ ಲೂಯಿಸ್ ಡಿಸೋಜಾ ಅವರ ಮನೆಯ ಮಾಡು ಫೆ.7ರಂದು ಬೆಳಗ್ಗೆ ಆಕಸ್ಮಿಕವಾಗಿ ಕುಸಿದು ಸುಮಾರು 1 ಲಕ್ಷ ರೂ. ನಷ್ಟ ಸಂಭವಿಸಿದೆ ಎಂದು ತಿಳಿದು ಬಂದಿದೆ.

ಮನೆಯ ಸದಸ್ಯರು ಮನೆಯ ಹೊರಗಡೆ ಇರುವಾಗ ಘಟನೆ ನಡೆದುದರಿಂದ ಅದೃಷ್ಟವಶಾತ್ ಯಾವುದೇ ಅನಾಹುತ ಸಂಭವಿಸಿಲ್ಲ.

ಸ್ಥಳಕ್ಕೆ ಮುಂಡೂರು ಗ್ರಾಮ ಆಡಳಿತ ಅಧಿಕಾರಿ ತುಳಸಿ ಆಗಮಿಸಿ ಪರಿಶೀಲಿಸಿದರು. ಮುಂಡೂರು ಗ್ರಾಮ ಪಂಚಾಯತ್ ಸದಸ್ಯ ಉಮೇಶ್ ಗೌಡ ಅಂಬಟ ಅವರು ಮನೆಯವರಿಗೆ ಅಗತ್ಯ ಸಹಕಾರವನ್ನು ನೀಡುತ್ತಿದ್ದಾರೆ.

Leave a Reply

Your email address will not be published. Required fields are marked *

error: Content is protected !!