ಪ್ರಕಾಶ್ ಪುರುಷರಕಟ್ಟೆಯವರ ಮೃತದೇಹ ಮೆರವಣಿಗೆ
ಪುತ್ತೂರು: ನಿನ್ನೆ (ಜೂ.11ರಂದು) ಹೃದಯಾಘಾತದಿಂದ ಮೃತಪಟ್ಟ ನರಿಮೊಗರು ವಲಯ ಕಾಂಗ್ರೆಸ್ ಅಧ್ಯಕ್ಷ, ಉದ್ಯಮಿ ಪ್ರಕಾಶ್ ಪುರುಷರಕಟ್ಟೆ ಅವರ ಮೃತದೇಹದ ಅಂತಿಮ ಯಾತ್ರೆ ಪುತ್ತೂರು ಸರಕಾರಿ ಆಸ್ಪತ್ರೆ ಬಳಿಯಿಂದ ಪುರುಷರಕಟ್ಟೆಯ ಪ್ರಕಾಶ್ ಅವರ ಮನೆ ವರೆಗೆ ನಡೆಯಿತು. ಆಂಬ್ಯುಲೆನ್ಸ್‌ನಲ್ಲಿ ಮೂಲಕ ಮೃತದೇಹವನ್ನು ಕೊಂಡೊಯ್ಯಲಾಯಿತು. ಶಾಸಕ ಅಶೋಕ್ ಕುಮಾರ್ ರೈ ಮೆರವಣಿಗೆಯ ನೇತೃತ್ವ ವಹಿಸಿದ್ದರು. ಮೆರವಣಿಗೆಯಲ್ಲಿ ನೂರಾರು ಮಂದಿ ಪಾಲ್ಗೊಂಡಿದ್ದರು.
ಪುತ್ತೂರು ಗಾಂಧಿ ಕಟ್ಟೆ ಬಳಿ, ಎಪಿಎಂಸಿ ಕಾಂಗ್ರೆಸ್ ಕಚೇರಿ ಬಳಿ, ದರ್ಬೆಯಲ್ಲಿ ಮುಕ್ವೆಯಲ್ಲಿ ಹಾಗೂ ಪುರುಷರಕಟ್ಟೆ ಜಂಕ್ಷನ್‌ನಲ್ಲಿ ಸೇರಿದ್ದ ಜನರಿಗೆ ಮೃತದೇಹವನ್ನು ನೋಡಲು ಅವಕಾಶ ಮಾಡಿಕೊಡಲಾಯಿತು. ಪುತ್ತೂರಿನಿಂದ ಹೊರಟ ಪ್ರಕಾಶ್ ಅವರ ಅಂತಿಮ ಯಾತ್ರೆಯಲ್ಲಿ ನೂರಾರು ಮಂದಿ ಭಾಗಿಯಾಗಿದ್ದರು. ಮೃತದೇಹ ಪುರುಷರಕಟ್ಟೆಯ ಮನೆಗೆ ತಲುಪುತ್ತಿದ್ದಂತೆ ಮನೆ ಬಳಿ ನೂರಾರು ಮಂದಿ ಸೇರಿದ್ದರು.