ಕುಂಬ್ರ: ಸಾರೆಪುಣೆಯಲ್ಲಿ ರಸ್ತೆ ಬದಿಯ ಚರಂಡಿಗೆ ರಿಕ್ಷಾ ಪಲ್ಟಿ; ಇಬ್ಬರಿಗೆ ಗಾಯ
ಪುತ್ತೂರು: ಚಾಲಕರ ನಿಯಂತ್ರಣ ತಪ್ಪಿ ಆಟೋರಿಕ್ಷಾವೊಂದು ರಸ್ತೆ ಬದಿಯ ಚರಂಡಿಗೆ ಪಲ್ಟಿಯಾದ ಘಟನೆ ಎ.30ರಂದು ನಡೆದಿದೆ.

ಘಟನೆಯಿಂದ ಆಟೋ ಚಾಲಕ ಅಲ್ಪ ಸ್ವಲ್ಪ ಗಾಯಗಳೊಂದಿಗೆ ಪಾರಾಗಿದ್ದು ರಿಕ್ಷಾದಲ್ಲಿ ಇಬ್ಬರು ಮಹಿಳೆಯರಿಗೆ ಗಂಭೀರ ಗಾಯಗಳಾಗಿರುವುದಾಗಿ ತಿಳಿದು ಬಂದಿದೆ. ಗಾಯಾಳುಗಳನ್ನು ಆಸ್ಪತ್ರೆಗೆ ದಾಖಲಿಸಲಾಗಿದೆ. ರಿಕ್ಷಾ ನಜ್ಜು ಗುಜ್ಜಾಗಿದೆ. ಪಲ್ಟಿಯಾದ ರಿಕ್ಷಾ ಮಾಡಾವು ಮೂಲದ್ದು ಎನ್ನಲಾಗಿದೆ. ಹೆಚ್ಚಿನ ಮಾಹಿತಿ ನಿರೀಕ್ಷಿಸಲಾಗುತ್ತಿದೆ.