ಕ್ರೈಂ

ಅಪ್ರಾಪ್ತ ಬಾಲಕನನ್ನು ಅಪಹರಿಸಿದ 21 ವರ್ಷದ ಯುವಕ: ಕಾರಣ ಕೇಳಿ ಬೆಚ್ಚಿಬಿದ್ದ ಪೊಲೀಸರು

ಅಪ್ರಾಪ್ತ ಬಾಲಕನನ್ನು ಅಪಹರಿಸಿದ್ದಕ್ಕಾಗಿ 21 ವರ್ಷದ ಯುವಕನನ್ನು ದೆಹಲಿ ಪೊಲೀಸರು ಬಂಧಿಸಿದ್ದಾರೆ. ಅಪಹರಣಕ್ಕೆ ಯುವಕ ನೀಡಿದ ಕಾರಣ ಕೇಳಿ ಪೊಲೀಸರೇ ಬೆಚ್ಚಿ ಬಿದ್ದಿದ್ದಾರೆ.
ಸಂತಾನವಿಲ್ಲದ ತನ್ನ ಚಿಕ್ಕಪ್ಪನಿಗೆ ಉಡುಗೊರೆಯಾಗಿ ನೀಡುವ ಉದ್ದೇಶದಿಂದ ಅಪ್ರಾಪ್ತನನ್ನು ಅಪಹರಿಸಿದ್ದ ಎಂದು ಯುವಕ ಹೇಳಿದ್ದಾನೆ.

ಗೌತಮಪುರಿಯ ಮನೆಯ ಹೊರಗೆ ಆಟವಾಡುತ್ತಿದ್ದ ಅಪ್ರಾಪ್ತ ಬಾಲಕ ನಾಪತ್ತೆಯಾಗಿದ್ದ. ಎರಡು ದಿನಗಳ ಕಾಲ ಬಾಲಕನಿಗಾಗಿ ಹುಡುಕಾಟ ನಡೆಸಿದ ನಂತರ ಆತನ ತಂದೆ ಪೊಲೀಸ್ ದೂರು ನೀಡಿದ್ದರು.

ದೂರುದಾರರ ನೆರೆಹೊರೆಯವರಾದ ನೀರಜ್ ಕೂಡ ಅದೇ ರಾತ್ರಿ ಪ್ರದೇಶದಲ್ಲಿ ಇಲ್ಲದಾಗಿದ್ದು ಮರುದಿನ ಬೆಳಗಿನವರೆಗೂ ಬಂದಿರಲಿಲ್ಲ ಎನ್ನಲಾಗಿದೆ.

ಪೊಲೀಸರು ನೀರಜ್ ನನ್ನು ಪತ್ತೆ ಹಚ್ಚಿದ್ದಾರೆ. ಮಗುವನ್ನು ಅಪಹರಿಸಿ ಅಲಿಘರ್‌ನಲ್ಲಿರುವ ತನ್ನ ಚಿಕ್ಕಪ್ಪ ಸುನೀತ್ ಬಾಬು ಮನೆಗೆ ಕಳುಹಿಸಿದ್ದಾಗಿ ನೀರಜ್ ಹೇಳಿದ್ದಾನೆ.

ಆತನ ಚಿಕ್ಕಪ್ಪನ ಹೆಂಡತಿ ನಾಲ್ಕು ಗಂಡು ಮಕ್ಕಳಿಗೆ ಜನ್ಮ ನೀಡಿದ್ದರಾದರೂ ಯಾರೂ ಬದುಕುಳಿಯಲಿಲ್ಲ. ಹಾಗಾಗಿ ಅಪ್ರಾಪ್ತ ವಯಸ್ಕನನ್ನು ಉಡುಗೊರೆಯಾಗಿ ನೀಡಲು ಬಯಸಿದ್ದರು ಎನ್ನಲಾಗಿದೆ.

ಪೊಲೀಸರು ಮಗುವನ್ನು ರಕ್ಷಿಸಿ ಚಿಕ್ಕಪ್ಪ-ಸೋದರಳಿಯನನ್ನು ಬಂಧಿಸಿ ತನಿಖೆ ಮುಂದುವರಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!