ಕರಾವಳಿ

ಬೆಳ್ತಂಗಡಿ: ಚಿರತೆ ದಾಳಿಗೆ ಬಲಿಯಾದ ದನ- ಭಯ ಭೀತಗೊಂಡ ಜನತೆ



ಬೆಳ್ತಂಗಡಿ: ಚಿರತೆ ದಾಳಿಗೆ ದನವೊಂದು ಬಲಿಯಾದ ಘಟನೆ ಬೆಳ್ತಂಗಡಿ ತಾಲೂಕಿನ ಕುದ್ಯಾಡಿ ಗ್ರಾಮದಲ್ಲಿ ನಡೆದಿದೆ.

ಕುದ್ಯಾಡಿ ಗ್ರಾಮದ ಕೆಳಗಿನಬೆಟ್ಟು ಮನೆಯ ಶೀನ ಪೂಜಾರಿಯವರು ತಮ್ಮ‌ ದನವನ್ನು ಜ.5 ರಂದು ಬೆಳಿಗ್ಗೆ ತೋಟದಲ್ಲಿ ಮೇಯಲು ಬಿಟ್ಟಿದ್ದರು. ಆದ್ರೆ ಸುಮಾರು 11 ಗಂಟೆ ಸಮಯಕ್ಕೆ ಚಿರತೆ ದನದ ಮೇಲೆ ದಾಳಿ ಮಾಡಿದೆ ಎನ್ನಲಾಗಿದೆ. ಬಳಿಕ ಮನೆಯವರು ತೋಟಕ್ಕೆ ಬಂದಾಗ ಚಿರತೆ ಮನೆಯವರನ್ನು ಅಟ್ಟಾಡಿಸಿದೆ ಎಂದು ತಿಳಿದುಬಂದಿದೆ.

ಚಿರತೆ ದಾಳಿಗೆ ದನ ಬಲಿಯಾಗಿದ್ದು, ಕೂಡಲೇ ಶೀನ ಪೂಜಾರಿಯವರು ಸ್ಥಳೀಯ ಪಂಚಾಯತ್ ಗೆ ಹಾಗೂ ಇಲಾಖೆಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಸುಲ್ಕೇರಿ ಪಂಚಾಯತ್ ಅಧ್ಯಕ್ಷ ನಾರಾಯಾಣ ಪೂಜಾರಿ, ಅಳದಂಗಡಿ ಉಪ ಅರಣ್ಯಧಿಕಾರಿ ಸುರೇಶ್ ಗೌಡ ಹಾಗೂ ಸ್ಥಳೀಯರು ಭೇಟಿ ನೀಡಿದ್ದಾರೆ.

ಈ ಭಾಗದಲ್ಲಿ ಕಳೆದ ಕೆಲ ಸಮಯದಿಂದ ಚಿರತೆ ಹಾವಳಿ ಹೆಚ್ಚಾಗಿದ್ದು, ಜನ ಭಯಬೀತರಾಗಿದ್ದಾರೆ. ಚಿರತೆ ಪತ್ತೆಗೆ ಅರಣ್ಯಾಧಿಕಾರಿಗಳು ಕ್ರಮ ಕೈಗೊಂಡಿದ್ದು, ಬೋನ್ ಅಳವಡಿಸಲಾಗಿದೆ.

Leave a Reply

Your email address will not be published. Required fields are marked *

error: Content is protected !!