ಬೆಂಗಳೂರು ಮೀನು ವ್ಯಾಪಾರಿಗಳ ಮೇಲೆ ತಲ್ವಾರು ದಾಳಿಗೆ ಯತ್ನ
ಬೆಂಗಳೂರು: ನಗರದಲ್ಲಿ ಇತ್ತೀಚೆಗೆ ಬೇಕರಿಯಲ್ಲಿ ಇಬ್ಬರು ಕೆಲಸಗಾರರ ಮೇಲೆ ಹಲ್ಲೆ ನಡೆಸಿದ ಪ್ರಕರಣ ಮಾಸುವ ಮುನ್ನವೇ ಮೀನು ವ್ಯಾಪಾರಿ ಮೇಲೆ ಮಾರಕಾಸ್ತ್ರ ಬೀಸಲು ಯತ್ನಿಸಿದ ಘಟನೆ ಬಾಣಸವಾಡಿಯ ಜೈಭಾರತ್ ನಗರದಲ್ಲಿ ನಡೆದಿದ್ದು, ಪ್ರಕರಣ ದಾಖಲಾಗಿದೆ.

ರೌಡಿಯೊಬ್ಬ ಮೀನು ವ್ಯಾಪಾರಿಯತ್ತ ಮಾರಕಾಸ್ತ್ರದಿಂದ ದಾಳಿಗೆ ಯತ್ನಿಸುವ ದೃಶ್ಯ ಸಿಸಿಟಿವಿಯಲ್ಲಿ ಸೆರೆಯಾಗಿದ್ದು, ಈ ಸಂಬಂಧ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಆರೋಪಿ ವಿರುದ್ಧ ಪ್ರಕರಣ ದಾಖಲಿಸಿಕೊಂಡಿದ್ದಾರೆ.
ಆರೋಪಿಯು ಹಫ್ತಾ ಕೊಡಲಿಲ್ಲ ಎಂದ ಮೀನು ವ್ಯಾಪಾರಿ ಮೇಲೆ ದಾಳಿಗೆ ಯತ್ನಿಸಿದ್ದಾನೆ ಎನ್ನಲಾಗಿದೆ.
ಮೀನು ವ್ಯಾಪಾರಿಗಳು ಬೆಳ್ತಂಗಡಿ ಮೂಲದವರು ಎನ್ನಲಾಗಿದೆ.
ಮಾರಕಾಸ್ತ್ರ ಹಿಡಿದು ರಾಜ ರೋಷವಾಗಿ ಸುತ್ತಾಡುತ್ತಾ ಭೀತಿ ಹುಟ್ಟಿಸುತ್ತಿರುವ ಕಿಡಿಗೇಡಿಗಳು ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಬೇಕೆಂದು ಸಾರ್ವಜನಿಕ ರು ಆಗ್ರಹಿಸಿದ್ದಾರೆ.





