ಸುಳ್ಯ: ಸಾರ್ವಜನಿಕ ರಸ್ತೆ ಬದಿಯ ಜಮೀನಿನಲ್ಲಿ ಮರಳು ದಾಸ್ತಾನು, ಸುಮಾರು 100 ಲೋಡ್ ಮರಳು ವಶಪಡಿಸಿದ ಕಂದಾಯ ಇಲಾಖೆ
ಸುಳ್ಯ: ಅಕ್ರಮ ಗಣಿಗಾರಿಕೆ ಮತ್ತು ಮರಳು ದಾಸ್ತಾನು ಘಟಕಗಳ ಮೇಲೆ ದಿಡೀರ್ ದಾಳಿ ಕಳೆದ ಕೆಲವು ದಿನಗಳಿಂದ ಸುಳ್ಯ ತಾಲೂಕು ಆಡಳಿತದ ಅಧಿಕಾರಿಗಳ ನೇತೃತ್ವದಲ್ಲಿ ನಡೆಯುತ್ತಿದ್ದು ಇಂದು ಸುಳ್ಯದ ಮೇನಾಲದಲ್ಲಿ ನೂರಕ್ಕೂ ಹೆಚ್ಚು ಅಧಿಕ ಲೋಡ್ ಮರಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಿಳಿದುಬಂದಿದೆ.
ಮೇನಾಲ ಬಳಿ ರಸ್ತೆ ಪರಂಬೋಕು ಸ್ಥಳದಲ್ಲಿ ಮರಳು ದಾಸ್ತಾನು ಮಾಡಲಾಗಿರುವ ಮಾಹಿತಿ ಪಡೆದ ಕಂದಾಯ ಇಲಾಖೆಯ ಅಧಿಕಾರಿಗಳು ಡಿ.18 ರಂದು ವಶಪಡಿಸಿಕೊಂಡಿದ್ದಾರೆ.
ಅಜ್ಜಾವರ ಗ್ರಾಮ ಆಡಳಿತಾಧಿಕಾರಿ ಶರತ್ ಹಾಗೂ ಮೆಸ್ಕಾಂ ಎ.ಇ. ಸುಪ್ರೀತ್ ಮರಳು ದಾಸ್ತಾನು ಸ್ಥಳಕ್ಕೆ ತೆರಳಿ ಮಹಜರು ನಡೆಸಿ
ಸುಳ್ಯ ತಹಶೀಲ್ದಾರ್ ರಿಗೆ ವರದಿ ನೀಡಿದ್ದ ಹಿನ್ನೆಲೆಯಲ್ಲಿ ಈ ದಾಸ್ತಾನು ಘಟನೆ ಬೆಳಕಿಗೆ ಬಂದಿದೆ.
ಇಂದು ಗಣಿ ಇಲಾಖೆಯವರು ಮೇನಾಲಕ್ಕೆ ಭೇಟಿ ನೀಡಿ ಮರಳು ತಮ್ಮ ವಶಕ್ಕೆ ಪಡೆಯಲಿದ್ದಾರೆಂದು ತಿಳಿದುಬಂದಿದೆ.