ಬೆಳ್ತಂಗಡಿ: ಸುಟ್ಟ ಸ್ಥಿತಿಯಲ್ಲಿ ಮೃತದೇಹ ಪತ್ತೆ
ಬೆಳ್ತಂಗಡಿ ತಾಲೂಕಿನ ನಡ ಗ್ರಾ.ಪಂ ವ್ಯಾಪ್ತಿಯ ಕೇಲ್ತಾಜೆ ಸಮೀಪ ಮೃತದೇಹವೊಂದು ಸುಟ್ಟ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಪೊಲೀಸರು ಪರಿಶೀಲನೆ ನಡೆಸುತ್ತಿದ್ದಾರೆ.
ಕೇಲ್ತಾಜೆ ಸಮೀಪ ರಬ್ಬರ್ ತೋಟದಲ್ಲಿ ಸುಟ್ಟ ಮೃತದೇಹ ಪತ್ತೆಯಾಗಿದ್ದು ಮೃತದೇಹ ಸಂಪೂರ್ಣವಾಗಿ ಕೊಳೆತು ಹೋಗಿದ್ದು ಯಾವುದೇ ಗುರುತು ಸಿಗದ ಸ್ಥಿತಿಯಲ್ಲಿದೆ ಎಂದು ತಿಳಿದು ಬಂದಿದೆ. ಸ್ಥಳಕ್ಕೆ ಬೆಳ್ತಂಗಡಿ ಪೊಲೀಸರು ತೆರಳಿದ್ದು, ಪರಿಶೀಲನೆ ನಡೆಸಿದ್ದಾರೆ. ಮೃತದೇಹದ ಬಗ್ಗೆ ನಾನಾ ಸಂಶಯಗಳು ಉಂಟಾಗಿದ್ದು ಪೊಲೀಸ್ ತನಿಖೆಯಿಂದಷ್ಟೇ ಸತ್ಯಾಂಶ ಹೊರ ಬರಲಿದೆ.
ಕಟ್ಟಿಗೆ ಹಾಕಿ ಸುಟ್ಟ ರೀತಿಯಲ್ಲಿ ಮೃತದೇಹ ಪತ್ತೆಯಾಗಿದೆ ಎಂದು ಸ್ಥಳೀಯರು ಪೊಲೀಸರಿಗೆ ತಿಳಿಸಿದ್ದಾರೆ.