ವಿರಾಜಪೇಟೆ: ಯುವತಿಯನ್ನು ಕೊಲೆ ಮಾಡಿ ನಾಪತ್ತೆಯಾಗಿದ್ದ ಆರೋಪಿಯ ಮೃತದೇಹ ಪತ್ತೆ
ಕೊಡಗು ಜಿಲ್ಲೆಯ ವಿರಾಜಪೇಟೆಯಲ್ಲಿ ಕಳೆದ ಮೂರು ದಿನಗಳ ಹಿಂದೆ ನಡೆದಿದ್ದ ಯುವತಿಯ ಕೊಲೆ ಪ್ರಕರಣದ ಆರೋಪಿಯ ಮೃತ ದೇಹ ಕಂಡಂಗಾಲ ಗ್ರಾಮದ ಕೆರೆಯಲ್ಲೇ ಪತ್ತೆಯಾಗಿದೆ.

ಆರೋಪಿ ತಿಮ್ಮಯ್ಯ ಯುವತಿಯನ್ನು ಕೊಲೆ ಮಾಡಿದ ಬಳಿಕ ಕೆರೆಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿರುವ ಮಾತು ಕೇಳಿ ಬರುತ್ತಿತ್ತು.
ಇದೀಗ ಘಟನೆ ನಡೆದು ಮೂರು ದಿನಗಳ ಬಳಿಕ ತಿಮ್ಮಯ್ಯನ ಮೃತ ದೇಹ ಪತ್ತೆಯಾಗಿದೆ.
ವಿರಾಜಪೇಟೆ ಪೊಲೀಸರಿಂದ ಮೂರು ದಿನಗಳಕಾಲ ಆರೋಪಿಗಾಗಿ ಶೋಧ ಕಾರ್ಯ ನಡೆದಿತ್ತು.