ಕರಾವಳಿರಾಜಕೀಯ

ಸುಳ್ಯ ಸಂಪಾಜೆ ಗ್ರಾ.ಪಂ. ಸದಸ್ಯರ ರಾಜೀನಾಮೆ ಪರ್ವಕ್ಕೆ ನಾಟಕೀಯ ತಿರುವು: ಸದಸ್ಯತ್ವಕ್ಕೆ ಮೂವರು ಸದಸ್ಯರು ನೀಡಿದ್ದ ರಾಜೀನಾಮೆ ಅಂಗೀಕಾರ



ಸುಳ್ಯ: ಸಂಪಾಜೆ ಕಾಂಗ್ರೆಸ್ ನಲ್ಲಿ ಉಂಟಾಗಿರುವ ಬಿಕ್ಕಟ್ಟು ಆಡಳಿತದಲ್ಲಿರುವ ಗ್ರಾಮ ಪಂಚಾಯತಿನ ನಾಲ್ವರು ಸದಸ್ಯರ ರಾಜೀನಾಮೆಗೆ ಕಾರಣವಾಗಿತ್ತು.
ನಂತರದ ಬೆಳವಣಿಗೆಯಲ್ಲಿ ಪಕ್ಷದ ಮುಖಂಡರುಗಳು ಸೇರಿ ಮಾತುಕತೆ ನಡೆಸಿದ ಬಳಿಕ ಎಲ್ಲವೂ ಸರಿಯಾಗಿದೆ ಎಂದು ಹೇಳಿಕೊಂಡರು. ಇದೀಗ ಹೊಸದಾಗಿ ಮತ್ತೊಮ್ಮೆ ಇವರಲ್ಲಿದ್ದ ಬಿಕ್ಕಟ್ಟು ನಾಟಕೀಯ ತಿರುವನ್ನು ಪಡೆದುಕೊಂಡಿದೆ.

ಪಂಚಾಯತ್ ಸದಸ್ಯರಾದ ಸೋಮಶೇಖರ್ ಕೊಯಿಂಗಾಜೆ, ಉಪಾಧ್ಯಕ್ಷೆ ಲಿಸ್ಸಿ ಮೋನಾಲಿಸ, ಸದಸ್ಯರಾದ ಶೌವಾದ್ ಗೂನಡ್ಕ ಹಾಗೂ ವಿಮಲಪ್ರಸಾದ್ ಪಂಚಾಯತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದ ಸದಸ್ಯರಾಗಿದ್ದರು.

ಬಳಿಕ ಸುಳ್ಯದಲ್ಲಿ ಕಾಂಗ್ರೆಸ್ ಮುಖಂಡರ ಮಾತುಕತೆ ಹಿನ್ನಲೆಯಲ್ಲಿ ಸೋಮಶೇಖರ್ ಕೊಯಿಂಗಾಜೆ ಪಂಚಾಯತ್ ಸದಸ್ಯತ್ವಕ್ಕೆ ನೀಡಿದ್ದ ರಾಜೀನಾಮೆ ಹಿಂಪಡೆದಿದ್ದರು. ಆದರೆ ಲಿಸ್ಸಿ ಮೋನಾಲಿಸ, ಶೌವಾದ್ ಗೂನಡ್ಕ, ವಿಮಲಪ್ರಸಾದ್ ರಾಜೀನಾಮೆ ಹಿಂಪಡೆಯದಿದ್ದುದರಿಂದ, ರಾಜೀನಾಮೆ ಸಲ್ಲಿಸಿ 15 ದಿನಗಳಾಗಿದ್ದುದರಿಂದ ರಾಜೀನಾಮೆ ಅಂಗೀಕಾರ ಗೊಂಡಿರುವುದಾಗಿದೆ ಎಂದು ತಿಳಿದುಬಂದಿದೆ.


ಇದೀಗ ಅಧ್ಯಕ್ಷರು ರಾಜೀನಾಮೆ ಅಂಗೀಕಾರ ಮಾಡಿರುವ ವಿರುದ್ಧ ಸದಸ್ಯ ಸವಾದ್ ಗೂನಡ್ಕ ಮೇಲ್ಮನೆ ಸಲ್ಲಿಸುವುದಾಗಿ ಹೇಳಿಕೆಯನ್ನು ನೀಡಿರುವುದಾಗಿ ತಿಳಿದು ಬಂದಿದೆ.


ಈ ಸಂದರ್ಭದಲ್ಲಿ ಮಾತನಾಡಿರುವ ಅವರು ನವಂಬರ್ 25ರಂದು ಕೆಲವು ಕಾರಣಗಳಿಂದ ಸಂಪಾಜೆ ಗ್ರಾಮ ಪಂಚಾಯತ್ ಸದಸ್ಯತ್ವಕ್ಕೆ ನೀಡಿದ ರಾಜೀನಾಮೆಯನ್ನು ಹಿಂಪಡೆಯಲು ಡಿಸೆಂಬರ್ 5ರಂದು ಗ್ರಾಮ ಪಂಚಾಯಿತಿ ಕಚೇರಿಗೆ ತೆರಳಿದ್ದೆವು. ಆದರೆ ಅಲ್ಲಿ ಅಧ್ಯಕ್ಷರು ಉಪಸ್ಥಿತಿಯಲ್ಲಿ ಇಲ್ಲದ ಕಾರಣ ಪಂಚಾಯತ್ ಅಭಿವೃದ್ಧಿ ಅಧಿಕಾರಿಯ ಬಳಿ ರಾಜೀನಾಮೆ ಹಿಂಪಡೆಯುವ ಬಗ್ಗೆ ಅಧ್ಯಕ್ಷರಿಗೆ ಪತ್ರವನ್ನು ತಲುಪಿಸುವಂತೆ ತಿಳಿಸಿ ದೃಡೀಕರಣವನ್ನು ಕೂಡ ಪಡೆದಿರುತ್ತೇವೆ. ಅದರಂತೆ ಅಧಿಕಾರಿಯವರು ಕೂಡ ಅಧ್ಯಕ್ಷರಿಗೆ ಈ ವಿಷಯವನ್ನು ಗಮನಕ್ಕೆ ತಂದಿರುತ್ತಾರೆ.
ಆದರೆ ಅಧಿಕಾರದ ವ್ಯಾಮೋಹಕ್ಕಾಗಿ ಪಂಚಾಯತ್ ಅಧ್ಯಕ್ಷರಾದ ಜಿಕೆ ಅಮೀದ್ ರವರು ಅಧಿಕಾರವನ್ನು ದುರುಪಯೋಗಪಡಿಸಿಕೊಂಡಿದ್ದು ಇದರ ಬಗ್ಗೆ ಸಂಬಂಧಪಟ್ಟವರಿಗೆ ಮೇಲ್ಮನವಿಯನ್ನು ಸಲ್ಲಿಸಲಾಗುವುದು ಎಂದು ಹೇಳುತ್ತಿದ್ದಾರೆ.


ಒಟ್ಟಿನಲ್ಲಿ ಚುನಾವಣೆ ಸಮೀಪಿಸುತ್ತಿದ್ದಂತೆ ಸಂಪಾಜೆ ಕಾಂಗ್ರೆಸ್ಸಿನಲ್ಲಿ ರಾಜಕೀಯ ಚದುರಂಗದಾಟ ನಡೆಯಲು ಪ್ರಾರಂಭಿಸಿದೆ.
ಈ ಎಲ್ಲ ಘಟನೆಗಳಿಂದ ಸಂಪಾಜೆ ಗ್ರಾಮದ ಕಾಂಗ್ರೆಸ್ ಪಕ್ಷದ ಮುಂದಿನ ಸ್ಥಿತಿ ಏನಾಗಬಹುದೆಂಬ ಕುತೂಹಲ ಸಾರ್ವಜನಿಕ ವಲಯದಲ್ಲಿ ಚರ್ಚೆಗೆ ಕಾರಣವಾಗಿದೆ.

Leave a Reply

Your email address will not be published. Required fields are marked *

error: Content is protected !!