ಜಿಲ್ಲೆ

ಇಂದಿನಿಂದ ಅಜಿಲಮೊಗರು  ಬಾಬಾ ಫಕ್ರುದ್ದೀನ್ (ರ.ಆ ) ಮಾಲಿದಾ ಉರೂಸ್ |ದ.ಕ ಜಿಲ್ಲೆಯ ಸೌಹಾರ್ದತೆ ಊರಲ್ಲಿ ಮತ್ತೆ ಸಂಭ್ರಮ!

✍️ ಮಶಿತಾ ಅಲ್ – ಮಹದಿಯಾ । ನಮ್ಮೂರ ಕುರಿತು ನನ್ನೆರಡು ಮಾತು

ಕರ್ನಾಟಕದ  ಬಹುಪಾಲು ಜನರು ತಿಳಿದಿರುವ ಪ್ರಸಿದ್ಧ ಪುಣ್ಯ ಕ್ಷೇತ್ರದಲ್ಲಿ  ಒಂದಾದ  ಅಜಿಲಮೊಗರು. ಈ ಹೆಸರು ಕೇಳಿದ ತಕ್ಷಣ ನೆನಪಿಗೆ ಬರುವುದು ಮಾಲಿದಾ ಉರೂಸ್. ಈ ಮಣ್ಣಲ್ಲಿ ಝಕರಿಯ್ಯ (ರ.ಆ) ಅಂತ್ಯ ವಿಶ್ರಾಮ ಗೊಳುತ್ತಿದ್ದಾರೆ. ಅವರ ಗುರುಗಳಾದ ಬಾಬಾ ಫಕ್ರುದ್ದೀನ್ (ರ.ಆ )  ಆಂಧ್ರ ಪ್ರದೇಶದ ಪೆಣಗುಂಡದಲ್ಲಿ ನೆಲೆಗೊಂಡಿರುವರು. ಇವರಿಂದ ನಡೆದ ಪವಾಡಗಳು ಅಷ್ಟಿಷ್ಟಲ್ಲ. ಇಂತಹ ಮಹಾನರು ನೆಲೆಸಿರುವ ಊರಲ್ಲಿ ನಾವುಗಳು ಹುಟ್ಟಿ ಬೆಳೆದಿರುವುದು ನಮ್ಮ ಮಹಾಭಾಗ್ಯವೇ ಹೇಳಬೇಕು.

ಪವಾಡ ಪುರುಷರಾದ ಬಾಬಾ ಫಕ್ರುದ್ದೀನ್ (ರ.ಆ ) ರವರ ಒಂದು ಪವಾಡವೇ ಮಾಲಿದಾ ಹಲವಾರು ಪವಾಡಗಳಲ್ಲಿ ಇದು ಮಹಾನರ ದೊಡ್ಡ ಪವಾಡವೇ ಹೇಳಬಹುದು. ಇದು ಬರೀ ಸಿಹಿಯಲ್ಲ ಹಲವಾರು ರೋಗಗಳಿಗೆ ಔಷಧವಾಗಿದೆ. ಅಜಿಲಮೊಗರು ಮತ್ತು ಪೆಣಗುಂಡದಲ್ಲಿ ಮಾತ್ರ ಈ ಔಷಧ ವಿತರಣೆಯಾಗುವುದು.  ಜಗತ್ತಿನ ಯಾವ ಮೂಲೆಯಲ್ಲೂ ಸಿಗದ ಮದ್ದಾಗಿದೆ  ಇದು. ಇದಕ್ಕಾಗಿಯೇ ಪರವೂರ ಜನರೆಲ್ಲಾ ಬರುವರು. ಇದರ ಫಲಾನುಭವಿಗಳು ಬರೀ ಮುಸಲ್ಮಾನರು ಮಾತ್ರವಲ್ಲ ಅನ್ಯಧರ್ಮೀಯರೂ ಕೂಡ ಇದ್ದಾರೆ.

ಇಲ್ಲಿಯ  ಮಹಾನರಲ್ಲಿ ಏನೇ  ಹೇಳಿಕೊಂಡರೂ ಅದಕ್ಕೆ  ಪರಿಹಾರ ಸಿಗುತ್ತದೆ ಅಲ್ಲದೆ ಸನ್ನಿಧಿಗೆ ಭೇಟಿ ನೀಡಿ ಯಾವುದೇ ಸಮಸ್ಯೆ ಹೇಳಿಕೊಂಡು ಬರುವಾಗ ಮನಸ್ಸು ಹಗುರವಾಗುತ್ತದೆ  ಎಂಬುದು ಭಕ್ತರ ನಂಬಿಕೆ. ಈ ದರ್ಗಾಕ್ಕೆ ಬರುವವರ ಮುಸಲ್ಮಾನರ ಮಾತಲ್ಲ , ನಮ್ಮೂರಲ್ಲಿರೋ ಅನ್ಯಧರ್ಮೀಯದವರ ಬಾಯಲ್ಲಿ ಬರೋ ಮಾತೂ ಆಗಿದೆ.  ಅವರು ಆ  ಮಹಾತ್ಮರ ಮೇಲಿಟ್ಟಿರೋ ವಿಶ್ವಾಸ ಅಷ್ಟಿಷ್ಟಲ್ಲ. ತಮ್ಮೆಲ್ಲಾ ಕಾರ್ಯಗಳು ಯಶಸ್ವಿಯಾಗಲು ಮಹಾತ್ಮರುಗಳ ಭೇಟಿ ನೀಡಿ ಬಳಿಕ ಮುಂದಿನ ಕಾರ್ಯಕ್ಕೆ ಹೆಜ್ಜೆ ಇಡುತ್ತಾರೆ.

ಇನ್ನು ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಅನ್ನುವ ಬರುವ ಬೇರೆ ಅರ್ಥಗಳನ್ನು ಕಲ್ಪಿಸುವ  ಬದಲು ಈ ಅಜಿಲಮೊಗರು  ಅತ್ಯಂತ ಸೌಹಾರ್ದತೆಯಿಂದ  ಕೂಡಿದ ಒಂದು ಹಚ್ಚ ಹಸಿರಿನ ಊರು ಹೇಳುವುದರಲ್ಲಿ ಯಾವುದೇ ನಿಸ್ಸಂದೇಹವೇ ಇಲ್ಲ.  ಇಲ್ಲಿಯ ಈ ಮುಗ್ಧ ಜನರ ಸೌಹಾರ್ದ ಸೇತುವೆ ಯಾವತ್ತಿಗೂ ಮುರಿದು ಬೀಳದೆ  ಎಂದೂ ಹೀಗೇ ನೆಲೆಗೊಳ್ಳಲಿ ಎಂಬುವುದು ನಮ್ಮ ಆಶಯ.

ಇಲ್ಲಿ ಮಾಸಿಕವಾಗಿ ನಡೆಯುತ್ತಿರುವ ಜಲಾಲಿಯ್ಯ ರಾತೀಬ್ ಹಲವಾರು ಪ್ರಶ್ನೆಗಳಿಗೆ ಪರಿಹಾರವಾಗಿರುವ ಉದಾಹರಣೆಗಳಿವೆ. ಈ ಮಜ್ಲಿಸಿಗೆ ನಮ್ಮೂರರವರು ಅಲ್ಲದೆ  ಹಲವು  ಕಡೆಗಳಿಂದ  ಬಂದು  ಮಜ್ಲಿಸಿನ ಪುಣ್ಯ ಪಡೆದುಕೊಳ್ಳುತ್ತಿದ್ದಾರೆ.

ಮಜ್ಲಿಸ್ ನ  ನೇತೃತ್ವವನ್ನು  ಸಯ್ಯಿದ್ ಕುಂಬೋಲ್ ತಂಙಳ್ ಅವರು ವಹಿಸಲಿದ್ದು, ಎಲ್ಲಾ  ತಿಂಗಳ  ಕೊನೆಯ ಭಾನುವಾರದಂದು ನಡೆಯುತ್ತಿದೆ. ಉರೂಸ್ ಕಾರ್ಯಕ್ರಮಡಾ ಹಿನ್ನಲೆಯಿಂದ  ಉರೂಸು ನಡೆಯುವ  ಮೊದಲನೆಯ ದಿನ ಜ. 4ರಂದು ಜಲಾಲಿಯ್ಯ ರಾತೀಬ್ ನಡೆಯಲಿದೆ.  ಜ.5 ರಂದು ಭಂಡಾರದ ಹರಕೆಯ ಪ್ರಾರಂಭವಾಗಲಿದೆ ,ಜ.6 ರಂದು ಊರ ಪರವೂರ ಮಹನೀಯರ ಕೊಡುವಿಕೆಯಿಂದ ಕೂಡಿದ ಮಾಲಿದ ಹರಕೆ, ಜ.7ರಂದು ಮಾಲಿದಾ ವಿತರಣೆ ಹಾಗು ಜ.8ರಂದು ಕಂದೂರಿ ಊಟ ವಿತರಣೆ ನಡೆಯಲಿದೆ. ತಾವೆಲ್ಲರೂ ಬಂದು ಮಹಾತ್ಮರಲ್ಲಿ  ಪ್ರಾರ್ಥಿಸೋಣಾ.

Leave a Reply

Your email address will not be published. Required fields are marked *

error: Content is protected !!