ಸೆಲ್ಫಿ ತೆಗೆಯುತ್ತಿದ್ದ ವೇಳೆ ಕಾಲು ಜಾರಿ ಬಿದ್ದು ನಾಲ್ವರು ಯುವತಿಯರು ಮೃತ್ಯು
ಫಾಲ್ಸ್‌ನಲ್ಲಿ ಸೆಲ್ಫಿ ತೆಗೆದುಕೊಳ್ಳಲು ಹೋದ ನಾಲ್ವರು ಕಾಲೇಜು ವಿದ್ಯಾರ್ಥಿನಿಯರು ಆಯತಪ್ಪಿ ನೀರಿಗೆ ಬಿದ್ದು ಸಾವನ್ನಪ್ಪಿರುವ ಘಟನೆ ಬೆಳಗಾವಿ ತಾಲೂಕಿನ ಗಡಿಗೆ ಹೊಂದಿಕೊಂಡ, ಮಹಾರಾಷ್ಟ್ರದ ಕಿತವಾಡದಲ್ಲಿ ನಡೆದಿದೆ.
ಬೆಳಗಾವಿಯ ಉಜ್ವಲ ನಗರ ಆಸೀಯಾ ಮುಜಾವರ್ (17), ಅನಗೋಳದ ಕುದ್‌ಶೀಯಾ ಹಾಸನ್ ಪಟೇಲ್ (20), ಝಟ್‌ಪಟ್ ಕಾಲೊನಿಯ ರುಕ್ಕಶಾರ್ ಭಿಸ್ತಿ (20) ಹಾಗೂ ತಸ್ಮಿಯಾ (20) ಮೃತಪಟ್ಟವರು.
ಹಲವರು ಸೇರಿಕೊಂಡು ನೀರಿನ ಅಂಚಿಗೆ ನಿಂತು ಗುಂಪು ಸೆಲ್ಫಿ ತಗೆದುಕೊಳ್ಳುವ ವೇಳೆ ಕಾಲು ಜಾರಿ ಐವರು ಯುವತಿಯರು ನೀರಿಗೆ ಬಿದ್ದರು. ನೀರಿಗೆ ಬಿದ್ದವರು ಹಾಗೂ ಮೇಲೆ ನಿಂತವರಿಗೆ ಯಾರಿಗೂ ಈಜು ಬಾರದ ಕಾರಣ ರಕ್ಷಣೆ ಸಾಧ್ಯವಾಗಲಿಲ್ಲ ಎಂದು ತಿಳಿದು ಬಂದಿದೆ.
ಐವರಲ್ಲಿ ನಾಲ್ವರು ಸ್ಥಳದಲ್ಲೇ ಕೊನೆಯುಸಿರೆಳೆದರು. ಒಬ್ಬ ಯುವತಿಯನ್ನು ನೀರಿನಿಂದ ಮೇಲೆತ್ತಲಾಗಿದ್ದು ಅವರ ಸ್ಥಿತಿಯೂ ಚಿಂತಾಜನಕವಾಗಿದೆ ಎಂದು ತಿಳಿದು ಬಂದಿದೆ.
ಸಾವಿಗೀಡಾದ ನಾಲ್ವರು ಯುವತಿಯರ ಕುಟುಂಬದವರ ಆಕ್ರಂದನ ಮುಗಿಲು ಮುಟ್ಟಿತ್ತು.