ಪುತ್ರಿಯ ಹುಟ್ಟುಹಬ್ಬವನ್ನು ಅಂಗನವಾಡಿಯಲ್ಲಿ ಆಚರಿಸಿ ಪುಟಾಣಿಗಳಿಗೆ ಉಪಹಾರ ವ್ಯವಸ್ಥೆ ಏರ್ಪಡಿಸಿದ ಪೆರುವಾಯಿ ಗ್ರಾ.ಪಂ ಉಪಾಧ್ಯಕ್ಷೆ ನಫೀಸಾ
ಬಂಟ್ವಾಳ ತಾಲೂಕಿನ ಪೆರುವಾಯಿ ಗ್ರಾಮ ಪಂಚಾಯತ್ ಉಪಾಧ್ಯಕ್ಷೆ ನಫೀಸಾ ಅವರ ಪುತ್ರಿಯ ಹುಟ್ಟು ಹಬ್ಬವನ್ನು ಅಂಗನವಾಡಿ ಮಕ್ಕಳ ಜೊತೆ ಆಚರಿಸಲಾಯಿತು.
ನಫೀಸಾ ಪೆರುವಾಯಿ ಅವರ ಪುತ್ರಿ ಅಫ್ನಾ ಅವರ ಹುಟ್ಟು ಹಬ್ಬ ಪ್ರಯುಕ್ತ ನ.15ರಂದು ಪೆರುವಾಯಿ ಸಮೀಪದ ಕಡಂಬಿಲ ಅಂಗನವಾಡಿಯಲ್ಲಿ ಕೇಕ್ ಕತ್ತರಿಸಿ ಆಚರಿಸಲಾಯಿತು. ಪುತ್ರಿಯ ಹುಟ್ಟು ಹಬ್ಬದ ಪ್ರಯುಕ್ತ ನಫೀಸಾರವರು ಅಂಗನವಾಡಿ ಮಕ್ಕಳಿಗೆ ಲಘು ಉಪಹಾರ ವ್ಯವಸ್ಥೆಯನ್ನು ಮಾಡಿದ್ದರು.
ಅಂಗನವಾಡಿ ಕಾರ್ಯಕರ್ತೆ ಸರೋಜಿನಿ ಅವರು ಕೃತಜ್ಞತೆ ಸಲ್ಲಿಸಿದರು. ಪೆರುವಾಯಿ ಗ್ರಾ.ಪಂ ಅಧ್ಯಕ್ಷ ಬಾಲಕೃಷ್ಣ ಪೂಜಾರಿ, ಸದಸ್ಯೆ ಲಲಿತಾ, ಜನ ಶಿಕ್ಷಣ ಟ್ರಸ್ಟ್‌ನ ಚೇತನ್ ಮತ್ತಿತರರು ಉಪಸ್ಥಿತರಿದ್ದರು.