ಅವಹೇಳನಕಾರಿ ಬರಹದ ಬ್ಯಾನರ್ ಅಳವಡಿಕೆ: ಇಬ್ಬರ ಬಂಧನ
ಅವಹೇಳನಕಾರಿಯಾಗಿ ಬರಹ ಬರೆದು ಪೋಸ್ಟರ್ ಹಾಕಿದ ಬಗ್ಗೆ ಕಾರ್ಕಳ ನಗರ ಠಾಣೆಯಲ್ಲಿ ದಾಖಲಾದ ಪ್ರಕರಣ ಸಂಬಂಧ ಸತೀಶ್ ದೇವಾಡಿಗ ಹಾಗೂ ಬ್ಯಾನರ್ ಮಾಡಿಕೊಟ್ಟಿರುವ ಗ್ರಾಫಿಕ್ಸ್ ಮಾಲೀಕರನ್ನು ಕಾರ್ಕಳ ನಗರ ಪೊಲೀಸರು ಬಂಧಿಸಿದ್ದಾರೆ. ಆರೋಪಿಗಳನ್ನು ಕಾರ್ಕಳ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಆರೋಪಿ ಸತೀಶ್ ದೇವಾಡಿಗನಿಗೆ ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ. ಇನ್ನೋರ್ವ ಆರೋಪಿ ಗ್ರಾಫಿಕ್ಸ್ ಮಾಲಕರಿಗೆ ಷರತ್ತು ಬದ್ಧ ಜಾಮೀನು ಲಭಿಸಿದೆ.
ಇನ್ನೊಂದು ಧರ್ಮದ ಬಗ್ಗೆ ಅವಹೇಳನಕಾರಿ ಬರಹಗಳೊಂದಿಗೆ ಹಾಕಲಾದ ಬ್ಯಾನರ್ ಸೆ.2ರಂದು ಪ್ರತ್ಯಕ್ಷವಾಗಿದ್ದು, ಇದರಲ್ಲಿ ಸತೀಶ್ ದೇವಾಡಿಗ ತನ್ನ ಹೆಸರು ಹಾಗೂ ತಾನು ಸ್ವಾತಂತ್ರ್ಯ ಹೋರಾಟಗಾರ ಎಂಬುದಾಗಿ ಬರೆದುಕೊಂಡಿದ್ದನು. ಈ ಬಗ್ಗೆ ಕಾರ್ಕಳ ನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.