ಕತಾರ್: ರಸ್ತೆ ದಾಟುತ್ತಿದ್ದಾಗ ಕಾರು ಡಿಕ್ಕಿ ಉಪ್ಪಳ ಮೂಲದ ಮಹಮ್ಮದ್ ಹನೀಫ್ ಮೃತ್ಯು
ಕತಾರ್: ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದು ಕಾಸರಗೋಡು ಜಿಲ್ಲೆಯ ಉಪ್ಪಳ ಪಟವಾಡಿ ನಿವಾಸಿ ಮಹಮ್ಮದ್ ಹನೀಫ್(52) ಮೃತಪಟ್ಟಿದ್ದಾರೆ.ಇವರು ಕಳೆದ ಡಿಸೆಂಬರ್ ನಲ್ಲಿ ಕತಾರ್ ಗೆ ತೆರಳಿದ್ದರು.

ಹನೀಫ್ ಶನಿವಾರ ರಾತ್ರಿ ಕಂಪೆನಿಯಲ್ಲಿ ಕೆಲಸ ಮುಗಿಸಿ ರೂಂಗೆ ನಡೆದುಕೊಂಡು ಹೋಗುವಾಗ ರಸ್ತೆ ದಾಟುತ್ತಿದ್ದಾಗ ಕಾರು ಢಿಕ್ಕಿ ಹೊಡೆದಿದೆ. ಅಪಘಾತದಲ್ಲಿ ತೀವ್ರವಾಗಿ ಗಾಯಗೊಂಡಿದ್ದ ಹನೀಫ್ ಗೆ ಆಸ್ಪತ್ರೆಗೆ ದಾಖಲಿಸಲಾಗಿದೆ.ಆದರೆ ಚಿಕಿತ್ಸೆ ಫಲಿಸದೆ ಮೃತಪಟ್ಟಿದ್ದಾರೆ.