Uncategorized

ಮದರಸದ ವಿದ್ಯಾರ್ಥಿನಿಯನ್ನು ಎತ್ತಿ ರಸ್ತೆಗೆ ಎಸೆದ ಯುವಕ ವಿಡಿಯೋ ವೈರಲ್

ಮಂಜೇಶ್ವರ: ಮದರಸದ ವಿದ್ಯಾರ್ಥಿನಿಯನ್ನು ಎತ್ತಿ ಯುವಕನೋರ್ವ ರಸ್ತೆಗೆ ಎಸೆಯುವ ವಿಡಿಯೋ ವೈರಲ್ ಆಗಿದೆ.

ವಿಡಿಯೋದಲ್ಲಿ ಕಂಡು ಬಂದ ವಿದ್ಯಾರ್ಥಿನಿಯನ್ನು ಫಾತಿಮಾ ಎಂದು ಗುರುತಿಸಲಾಗಿದೆ. ಘಟನೆಯಲ್ಲಿ ಬಾಲಕಿಗೆ ಗಾಯವಾಗಿದ್ದು, ಮಂಗಳೂರಿನ‌ ಆಸ್ಪತ್ರೆಗೆ ದಾಖಲಿಸಲಾಗಿದೆ.

ಉದ್ಯಾವರದ ಸಿದ್ದೀಕ್‌ ಎಂಬಾತ ಬಾಲಕಿಯನ್ನು ಎತ್ತಿ ಎಸೆದಾತ ಎಂದು ಗುರುತಿಸಲಾಗಿದೆ.ಆತನನ್ನು ಪೊಲೀಸರು ವಶಕ್ಕೆ ಬಂಧಿಸಿದ್ದಾರೆ. ಯುವಕ ಮಾದಕ ವ್ಯಸನದ ಅಮಲಿನಿಂದ ಈತ ಬಾಲಕಿಯನ್ನು ಎತ್ತಿ ಎಸೆದಿರುವ ಸಂಶಯ ವ್ಯಕ್ತವಾಗಿದೆ.

ಇಂದು ಘಟನೆ ನಡೆದಿದ್ದು,ಮದರಸ ಅವರಣದ ಹೊರಗೆ ನಿಂತು‌ ಈತ ಕಾದು ಕುಳಿತಿದ್ದ ಎನ್ನಲಾಗಿದೆ.‌ಇದೀಗ ಘಟನೆಯ ವಿಡಿಯೋ ಭಾರೀ ವೈರಲ್ ಆಗಿದೆ.ಆರೋಪಿ ವಿರುದ್ಧ ಕ್ರಮಕ್ಕೆ ಬಾಲಕಿಯ ಪೋಷಕರು‌ ಆಗ್ರಹಿಸಿದ್ದಾರೆ.
ವಿದ್ಯಾರ್ಥಿನಿಯನ್ನು ಆ ರೀತಿ ಅಮಾನುಷವಾಗಿ ನೆಲಕ್ಕೆ ಎಸೆದಿದ್ದು ಯಾಕೆ ಎನ್ನುವ ಪ್ರಶ್ನೆ ಜನರನ್ನು ಕಾಡುತ್ತಿದ್ದು ಪೊಲೀಸ್ ತನಿಖೆಯಿಂದ ಸತ್ಯಾಂಶ ಹೊರಬರಲಿದೆ.

Leave a Reply

Your email address will not be published. Required fields are marked *

error: Content is protected !!