ಮದುವೆಯ ಸಂಭ್ರಮದಲ್ಲಿದ್ದ ಯುವತಿ ಕುಸಿದು ಬಿದ್ದು ಸಾವು
ಮದುವೆಯ ಮುನ್ನಾ ದಿನ ವಧುವೊಬ್ಬಳು ಕುಸಿದು ಬಿದ್ದುಮೃತಪಟ್ಟಿರುವ ಘಟನೆ ಮಲಪ್ಪುರಂನ ಪೆರಿಂತಲ್ಮನ್ನಾದಲ್ಲಿ ಜ.13 ರಂದು ನಡೆದಿದೆ.
ಪಾತೈಕ್ಕರ ಶಾಲೆಪಾಡಿ ಮುಸ್ತಫಾ ಮತ್ತು ಝೀನತ್ ದಂಪತಿ ಪುತ್ರಿ ಫಾತಿಮಾ ಬಾತೂರ್ (19.ವ) ಮೃತ ಯುವತಿ.
ಫಾತಿಮಾ ಅವರ ಮದುವೆ ಜ.14ರಂದು ನಡೆಯಬೇಕಾಗಿದ್ದು ಅದಕ್ಕೆ ಮನೆಯವರು ಎಲ್ಲ ಸಿದ್ದತೆಗಳನ್ನು ಮಾಡಿಕೊಂಡಿದ್ದರು. ಜ.13ರಂದು ಸಂಜೆ ಮೆಹಂದಿ ಏರ್ಪಡಿಸಲಾಗಿತ್ತು. ಮೆಹಂದಿ ಸಂಭ್ರಮದ ಮಧ್ಯೆ ಫಾತಿಮಾ ಏಕಾಏಕಿ ಕುಸಿದು ಬಿದ್ದಿದ್ದಾರೆ. ಈ ವೇಳೆ ತಕ್ಷಣವೇ ಅವರನ್ನು ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಅದಾಗಲೇ ಮೃತಪಟ್ಟಿದ್ದರು ಎಂದು ವೈದ್ಯರು ದೃಢೀಕರಿಸಿದ್ದಾರೆ.
ಮದುವೆಯ ಸಂಭ್ರಮದ ಮನೆಯಲ್ಲಿ ಸೂತಕದ ಛಾಯೆ ಆವರಿಸಿದ್ದು ಮನೆಯವರ ರೋದನ ಮುಗಿಲು ಮುಟ್ಟಿದೆ.ಸ್ಥಳಕ್ಕೆ ನೂರಾರು ಮಂದಿ ಭೇಟಿ ನೀಡಿದ್ದಾರೆ.