ಸುಳ್ಯ: ಸುಮಾರು 20 ಸಾವಿರ ರೂ.ಗಳನ್ನು ದೋಚಿದ ಕಳ್ಳರು
ಸುಳ್ಯ ಹಳೆಗೇಟಿನಲ್ಲಿರುವ ಡೊಮಿನಿಕ್ ಡಿಸೋಜಾ ಎಂಬುವವರ ಅಂಗಡಿಗೆ ನಿನ್ನೆ ರಾತ್ರಿ ನುಗ್ಗಿರುವ ಕಳ್ಳರು ಸುಮಾರು 20 ಸಾವಿರ ರೂಪಾಯಿ ನಗದು ದೋಚಿ ಪರಾರಿಯಾಗಿದ್ದಾರೆ ಎಂದು ತಿಳಿದುಬಂದಿದೆ.
ಎಂದಿನಂತೆ ಬೆಳಿಗ್ಗೆ ಅಂಗಡಿ ಬಾಗಿಲು ತೆರೆಯಲು ಬಂದಾಗ ಕಳ್ಳತನವಾಗಿರುವ ಬಗ್ಗೆ ತಿಳಿದುಬಂದಿದ್ದು ಅವರು ಸುಳ್ಯ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಕಳ್ಳತನ ಮಾಡಿರುವವರು ಅಂಗಡಿಯ ಶಟರ್ ಬೀಗವನ್ನು ಮುರಿದಿರುವ ಶಂಕೆಯನ್ನು ಅಂಗಡಿ ಮಾಲಕರು ಹೇಳಿದ್ದು ಕ್ಯಾಶ್ ಕೌಂಟರಿನಲ್ಲಿದ್ದ ಸುಮಾರು 20 ಸಾವಿರಕ್ಕೂ ಹೆಚ್ಚು ರೂಪಾಯಿಗಳನ್ನು ತೆಗೆದಿರುವ ಕಳ್ಳ ಸಾಕ್ಷ್ಯ ನಾಶಪಡಿಸುವ ಉದ್ದೇಶದಿಂದ ಕ್ಯಾಶ್ ಕೌಂಟರ್ ಗೆ ನೀರನ್ನು ಹಾಕಿ ಹೋಗಿರುವುದಾಗಿ ಕಾಣಿಸುತ್ತಿದೆ. ಕ್ಯಾಶ್ ಕೌಂಟರ್ ನಲ್ಲಿ ನೀರು ಚೆಲ್ಲಿರುವ ದೃಶ್ಯ ಕಂಡು ಬರುತ್ತಿದೆ ಅಂಗಡಿ ಮಾಲಕರು ಹೇಳಿದ್ದಾರೆ.