ಯುವತಿಯರನ್ನು `ಪೀಸ್’ ಎಂದು ಕರೆದರೆ ಕೇಸ್
ರೋಡ್ ರೋಮಿಯೋಗಳಿಗೆ ಸುಪ್ರಿಂ ಎಚ್ಚರಿಕೆ
ನವದೆಹಲಿ: ರಸ್ತೆ ಬದಿಯಲ್ಲಿ ಕಟ್ಟೆಯ ಮೇಲೆ ಕುಳಿತು ರಸ್ತೆಯಲ್ಲಿ ಹೋಗುವ ಯುವತಿ ಅಥವಾ ಬಾಲಕಿಯರನ್ನು ಕಂಡರೆ ಅವರನ್ನು ಪೀಸ್ ಎಂದು ಕರೆಯುವುದು ಕಾನೂನು ಪ್ರಕಾರ ಅಪರಾಧವಾಗಿದ್ದು ಈ ರೀತಿಯಾಗಿ ಹೆಣ್ಣುಮಕ್ಕಳನ್ನು ಪೀಸ್, ಐಟಂ ಎಂದು ಕರೆದರೆ ಕೇಸ್ ದಾಖಲಿಸಬಹುದಾಗಿದೆ ಎಂದು ಸುಪ್ರಿಂ ಕೋರ್ಟು ಎಚ್ಚರಿಕೆ ನೀಡಿದೆ.
ಮುಂಬೈಯಲ್ಲಿ ಅಪ್ರಾಪ್ತ ಬಾಲಕಿಯನ್ನು ಐಟಂ ಎಂದು ಕರೆದು ಲೈಂಗಿಕವಾಗಿ ಕಿರುಕುಳ ನೀಡಿದ 25 ವರ್ಷದ ಉದ್ಯಮಿಯೋರ್ವರಿಗೆ 1.5 ವರ್ಷ ಜೈಲು ಶಿಕ್ಷೆ ವಿಧಿಸಿ ಸುಪ್ರಿಂ ಕೋರ್ಟು ಆದೇಶಿಸಿದೆ. ಈ ವೇಳೆ ಮಹಿಳೆಯರನ್ನು ಐಟಂ ಎಂದು ಕರೆಯುವಂತಿಲ್ಲ ಎಂದು ರೋಡ್ ರೋಮಿಯೋಗಳಿಗೆ ಮುಂಬೈ ಕೋರ್ಟು ಎಚ್ಚರಿಕೆ ನೀಡಿತ್ತು.
ಮುಂಬೈನ ಸಿಂಢೋಶಿಯಲ್ಲಿರುವ ಸೆಷನ್ಸ್ ಕೋರ್ಟು ವಿಶೇಷ ನ್ಯಾಯಾಧೀಶರಾದ ಎಸ್ ಜೆ ಅನ್ಸಾರಿ ನೇತೃತ್ವದ ನ್ಯಾಯಾಧೀಶರ ತಂಡ ಐಟಂ ಎಂಬ ಪದವು ಮಹಿಳೆಯನ್ನು ಲೈಂಗಿಕವಾಗಿ ಆಕ್ಷೇಪಿಸುತ್ತದೆ . ಐಪಿಸಿ ಸೆಕ್ಷನ್ 354ರ ಅತಿರೇಖದ ವರ್ತಿನೆಯನ್ನು ಸೂಚಿಸುವ ಅಪರಾಧವಾಗಿದೆ ಎಂದು ಕೋರ್ಟು ಹೇಳಿದೆ.
ಮುಂದಿನ ದಿನಗಳಲ್ಲಿ ಮಹಿಳೆಯರು, ಯುವತಿಯರು, ಅಪ್ರಾಪ್ತ ಬಾಲಕಿಯರನ್ನು ಕಂಡರೆ ಪೀಸ್, ಐಟಂ ಎಂದು ಹೇಳಿದರೆ ಜೈಲು ಸೇರುವುದು ನಿಶ್ಚಿತ ಎಚ್ಚರ ಇರಲಿ.