ಕ್ರೈಂ

ಹೆಂಡತಿಯ ಜೀವ ಕಾಪಾಡುವ ಬದಲು ಮೊಬೈಲ್‌ನಲ್ಲಿ ವಿಡಿಯೋ ಮಾಡುತ್ತಾ ಕುಳಿತ ಗಂಡ!



ಉತ್ತರ ಪ್ರದೇಶ: ಹೆಂಡತಿ ಬೆಡ್​ರೂಂನಲ್ಲಿರುವ ಫ್ಯಾನ್​ಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ (Suicide) ಮಾಡಿಕೊಳ್ಳುತ್ತಿದ್ದರೆ ಆಕೆಯ ಗಂಡ ಅದನ್ನು ಮೊಬೈಲ್​ನಲ್ಲಿ ರೆಕಾರ್ಡ್​ ಮಾಡುತ್ತಾ ಕುಳಿತಿರುವ ಆಘಾತಕಾರಿ ಘಟನೆಯೊಂದು ಕಾನ್ಪುರದಲ್ಲಿ (Kanpur) ನಡೆದಿದೆ. ತನ್ನ ಹೆಂಡತಿ ಆತ್ಮಹತ್ಯೆ ಮಾಡಿಕೊಳ್ಳುತ್ತಿದ್ದಾಗ ಆಕೆಯನ್ನು ಕಾಪಾಡುವುದರ ಬದಲು ಅದನ್ನು ವಿಡಿಯೋ ಮಾಡುತ್ತಿದ್ದ ಪತಿ ಮಹಾಶಯ ಇದೀಗ ಪೊಲೀಸರ ಅತಿಥಿಯಾಗಿದ್ದಾನೆ.

ಸಾಂದರ್ಭಿಕ ಚಿತ್ರ

ಮಹಿಳೆಯೊಬ್ಬರು ಸೀಲಿಂಗ್ ಫ್ಯಾನ್‌ಗೆ ನೇಣು ಬಿಗಿದುಕೊಳ್ಳಲು ಯತ್ನಿಸುತ್ತಿರುವ ವಿಡಿಯೋವೊಂದು ಹೊರಬಿದ್ದಿದ್ದು, ಆಕೆಯನ್ನು ರಕ್ಷಿಸುವ ಬದಲು ಆಕೆಯ ಪತಿ ಅದನ್ನು ವಿಡಿಯೋ ಮಾಡುವುದರಲ್ಲಿ ನಿರತರಾಗಿದ್ದ. ಆತನ ಹೆಂಡತಿ ತನ್ನ ಮೊದಲ ಪ್ರಯತ್ನದಲ್ಲಿ ವಿಫಲಳಾದರೂ ಎರಡನೇ ಪ್ರಯತ್ನದಲ್ಲಿ ನೇಣು ಹಾಕಿಕೊಂಡು ಮೃತಪಟ್ಟಿದ್ದಾಳೆ.

ಆ ಮಹಿಳೆಯ ತಂದೆ ರಾಜ್ ಕಿಶೋರ್ ಗುಪ್ತಾ ಈ ಬಗ್ಗೆ ಸುದ್ದಿಗಾರರೊಂದಿಗೆ ಮಾತನಾಡಿದ್ದು, ನನ್ನ ಅಳಿಯ ಸಂಜೀವ್ ಗುಪ್ತಾ ಮಧ್ಯಾಹ್ನ ಫೋನ್ ಮಾಡಿ ನನ್ನ ಮಗಳು ಶೋಭಿತಾ ಆತ್ಮಹತ್ಯೆ ಮಾಡಿಕೊಂಡಿರುವ ವಿಚಾರ ತಿಳಿಸಿದರು ಎಂದು ಹೇಳಿದ್ದಾರೆ.

ಮೃತನ ಕುಟುಂಬದವರು ಘಟನೆಯ ಕುರಿತು ಪೊಲೀಸರಿಗೆ ಮಾಹಿತಿ ನೀಡಿದ್ದು, ಶವವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ. ಸಂಜೀವ್ ಗುಪ್ತಾ ಅವರನ್ನು ಪೊಲೀಸರು ವಿಚಾರಣೆ ನಡೆಸುತ್ತಿದ್ದಾರೆ. ಇವರಿಬ್ಬರೂ 4 ವರ್ಷಗಳ ಹಿಂದೆ ಮದುವೆಯಾಗಿದ್ದರು.

Leave a Reply

Your email address will not be published. Required fields are marked *

error: Content is protected !!