ಪುತ್ತೂರು: ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ಪ್ರಕರಣ, ಮಾಲೀಕರಿಗೆ ದಂಡ

ಪುತ್ತೂರು: ದಿನಾಂಕ:-31-08-2025 ರಂದು ಪುತ್ತೂರು ಕಸಬಾ ಗ್ರಾಮದ, ಕ್ಯಾಮ್ಕೋ ಕಛೇರಿ ಎದುರು ಅಪ್ರಾಪ್ತ ಬಾಲಕನೊಬ್ಬ ದ್ವಿಚಕ್ರ ವಾಹನವನ್ನು ಅಜಾರೂಕತೆ ಮತ್ತು ನಿರ್ಲಕ್ಷ್ಯತನದಿಂದ ಚಲಾಯಿಸಿ ಇನ್ನೊಂದು ದ್ವಿಚಕ್ರ ವಾಹನಕ್ಕೆ ಡಿಕ್ಕಿಪಡಿಸಿ ಸ್ಕೂಟರ್ ಸಮೇತ ರಸ್ತೆಗೆ ಬಿದ್ದು ಗಾಯಗೊಂಡಿದ್ದು, ಈ ಬಗ್ಗೆ ಪುತ್ತೂರು ಸಂಚಾರ ಪೊಲೀಸ್ ಠಾಣೆಯಲ್ಲಿ ಅ.ಕ್ರ: 111/2025, ಕಲಂ: 5 ಜೊತೆಗೆ 199(ಎ) IMV ACT ರಡಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಅಪ್ರಾಪ್ತ ಬಾಲಕನಿಗೆ ದ್ವಿಚಕ್ರ ವಾಹನ ಚಲಾಯಿಸಲು ನೀಡಿದ ವಾಹನದ ನೋಂದಣಿ ಮಾಲೀಕರಿಗೆ ನ್ಯಾಯಾಲಯವು 20,000/- ದಂಡ ವಿಧಿಸಿದೆ.




