ಕರಾವಳಿ

ನಾಲ್ಕು ದ್ವಿಚಕ್ರ ವಾಹನಗಳಿಗೆ ಡಿಕ್ಕಿ ಹೊಡೆದು ಪರಾರಿಯಾಗಿದ್ದ ಕಾರು ಚಲಾಯಿಸಿದ್ದು ಅಪ್ರಾಪ್ತ ಬಾಲಕ, ಪ್ರಕರಣ ದಾಖಲು

ಪುತ್ತೂರು: ಸಂಟ್ಯಾರ್ ಸಮೀಪ ಮಾ.12ರಂದು ನಾಲ್ಕು ದ್ವಿಚಕ್ರ ವಾಹನಗಳಿಗೆ ಕಾರೊಂದು ಡಿಕ್ಕಿಪಡಿಸಿ ಪರಾರಿಯಾದ ಘಟನೆಗೆ ಸಂಬಂಧಿಸಿದಂತೆ, ಪುತ್ತೂರು ಗ್ರಾಮಾಂತರ ಪೊಲೀಸ್‌ ಠಾಣೆಯಲ್ಲಿ ಅ.ಕ್ರ:42/2026, ಕಲಂ: 281, 125(ಎ) ಭಾರತೀಯ ನ್ಯಾಯ ಸಂಹಿತೆ-2023 ಮತ್ತು ಕಲಂ: 134(ಎ&ಬಿ) ಐಎಂವಿ ಆಕ್ಟ್‌ ರಂತೆ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗಿ, ಸದ್ರಿ ಕಾರಿನ ಚಾಲಕನು ಅಪ್ರಾಪ್ತನಾಗಿದ್ದು, ವಾಹನದ ಮಾಲಿಕರಾದ  ಅಪ್ರಾಪ್ತ ‌ ಬಾಲಕನ ತಾಯಿ ಪುತ್ತೂರು ನಿವಾಸಿ  ಕೆ ಎ ಮಮತಾಜ್ (42) ಎಂಬವರ ವಿರುದ್ಧ ಪ್ರಕರಣ ದಾಖಲಾಗಿದೆ.

Leave a Reply

Your email address will not be published. Required fields are marked *

error: Content is protected !!