ಕರಾವಳಿಕ್ರೈಂ

ನಿಲ್ಲಿಸಿದ್ದ ರಿಕ್ಷಾದಿಂದ ದಾಖಲೆಯ ಬ್ಯಾಗ್ ಕಳ್ಳತನ

ಪುತ್ತೂರು: ಇಲ್ಲಿನ ಮಿನಿವಿಧಾನಸೌಧದ ಬಳಿ ನಿಲ್ಲಿಸಿ ಹೋಗಿದ್ದ ರಿಕ್ಷಾವೊಂದರಲ್ಲಿದ್ದ ದಾಖಲೆಗಳನ್ನು ಹೊಂದಿದ್ದ ಬ್ಯಾಗ್ ಒಂದನ್ನು ಕಳವುಗೈಯಲಾಗಿದೆ. ಈ ಬಗ್ಗೆ ರಿಕ್ಷಾ ಮಾಲಕ ಬೆಟ್ಟಂಪಾಡಿಯ ಸುಭಾಸ್ ರವರು ಪುತ್ತೂರು ನಗರ ಠಾಣೆಗೆ ದೂರು ನೀಡಿದ್ದಾರೆ.

ಆ.18 ರಂದು ಬೆಳಿಗ್ಗೆ ಮಿನಿವಿಧಾನಸೌಧದ ಬಳಿ ಆಟೋ ರಿಕ್ಷಾ ಅದ್ಯ ನಿಲ್ಲಿಸಿ ಅನ್ಯ ಕಾರ್ಯ ನಿಮಿತ್ತ ತೆರಳಿದ್ದೆ. ಈ ಸಮಯದಲ್ಲಿ ಅಟೋ ರಿಕ್ಷಾದಲ್ಲಿದ್ದ ಬ್ಯಾಗು ಕಾಣೆಯಾಗಿರುತ್ತದೆ. ನನ್ನ ಜಾಗದ ಮೂಲ ದಾಖಲೆಗಳು, ಎಟಿಎಂ ಕಾರ್ಡ್, ಆಧಾರ್ ಕಾರ್ಡ್, ಪಾನ್ ಕಾರ್ಡ್, ವೋಟರ್ ಐಡಿ, ಆಯುಷ್ಮಾನ್ ಕಾರ್ಡ್, ಇ-ಶ್ರಮ್ ಕಾರ್ಡ್, ಮಾತ ಚಿನ್ನದ ಸ್ತ್ರೀಂ ನ 3 ಕಾರ್ಡ್ ಗಳು ಕಾಣೆಯಾಗಿರುತ್ತವೆ’ ಎಂದು ಸುಭಾಸ್ ದೂರಿನಲ್ಲಿ ತಿಳಿಸಿದ್ದಾರೆ. ನಗರ ಠಾಣಾ ಪೊಲೀಸರು ದೂರು ದಾಖಲಿಸಿಕೊಂಡಿದ್ದಾರೆ.

Leave a Reply

Your email address will not be published. Required fields are marked *

error: Content is protected !!