ಕರಾವಳಿ

ಪೆರಾಜೆ :ಫೆ 16 ರಂದು ಗಡಿನಾಡ ಕನ್ನಡಿಗರ ಸ್ನೇಹ ಸಮ್ಮಿಲನ: ಮಾಧ್ಯಮ ಕ್ಷೇತ್ರದಿಂದ ಹರೀಶ್ ಬಂಟ್ವಾಳ್ ಹಾಗೂ ಹಸೈನಾರ್ ಜಯನಗರರವರಿಗೆ ಸನ್ಮಾನ

ಸುಳ್ಯ: ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಪಡೆ ಕೊಡಗು ಜಿಲ್ಲಾ ಘಟಕದ ವತಿಯಿಂದ ಕನ್ನಡ ಶಾಲೆ ಉಳಿಸಿ ಬೆಳೆಸಿ ಅಭಿಯಾನದ 50ರ ಸಂಭ್ರಮ ಗಡಿನಾಡ ಕನ್ನಡಿಗರ ಸ್ನೇಹ ಸಂಗಮ ಫೆ.16ರಂದು ಪೆರಾಜೆಯ ಕನ್ನಡ ಪೆರಾಜೆ ಶಾಲೆಯಲ್ಲಿ ನಡೆಯಲಿದೆ.

ಈ ಕಾರ್ಯಕ್ರಮದಲ್ಲಿ ಸ್ವಾಭಿಮಾನಿ ಕನ್ನಡಿಗ ಪ್ರಶಸ್ತಿ ಪ್ರಧಾನ ಸಮಾರಂಭ ಹಾಗೂ ವಿವಿಧ ಕ್ಷೇತ್ರದಲ್ಲಿ ಸಾಧನೆಗೈದ ಸಾಧಕರನ್ನು ಗೌರವಿಸಿ ಸನ್ಮಾನಿಸುವ ಕಾರ್ಯಕ್ರಮ ನಡೆಯಲಿದ್ದು ಮಾಧ್ಯಮ ಕ್ಷೇತ್ರದ ಸಾಧನೆಗಾಗಿ ಸುಳ್ಯ ಸುದ್ದಿ ಬಿಡುಗಡೆ ಪತ್ರಿಕೆಯ ಪ್ರಧಾನ ಸಂಪಾದಕ ಹರೀಶ್ ಬಂಟ್ವಾಳ್,ಹಾಗೂ ವರದಿಗಾರ ಹಸೈನಾರ್ ಜಯನಗರ ಸನ್ಮಾನ ಸ್ವೀಕರಿಸಲಿದ್ದಾರೆ.

ಅಲ್ಲದೆ ಸ್ನೇಹ ಸಂಗಮದಲ್ಲಿ ಉಚಿತ ಕಿವಿಯ ತಪಾಷಣೆ, ರಕ್ತದಾನ ಶಿಬಿರ, ಆರೋಗ್ಯ ಶಿಬಿರ, ಮೆಡಿಕಲ್ ಕಿಟ್ ಹಸ್ತಾಂತರ, ಸವಲತ್ತು ವಿತರಣೆ, ವೀಲ್ ಚೇರ್ ಕೊಡುಗೆ, ಕ್ರೀಡಾ ಕೂಟ, ಹಾಗೂ ಇನ್ನೂ ಹಲವಾರು ಮಂದಿ ಸಾಧಕರ ಸನ್ಮಾನ ಕಾರ್ಯಕ್ರಮ ನಡೆಯಲಿದ್ದು
ಕಾರ್ಯಕ್ರಮಕ್ಕೆ ಸಿನಿಮಾ ತಾರೆಯರು,ಕ್ರೀಡಾ ಸಾಮಾಜಿಕ ರಾಜಕೀಯ ಮುಖಂಡರುಗಳು ಭಾಗವಹಿಸಲಿದ್ದಾರೆ ಎಂದು ಸಂಘಟಕರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

Leave a Reply

Your email address will not be published. Required fields are marked *

error: Content is protected !!