ವಜಾಗೊಂಡಿದ್ದ 9 ಮಹಿಳಾ ಸಿಬ್ಬಂದಿಗಳ ಮರುನೇಮಕ: ಮನವಿಗೆ ಸ್ಪಂದಿಸಿ ಬೇಡಿಕೆ ಈಡೇರಿಸಿದ ಶಾಸಕರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಕೆ

ಪುತ್ತೂರು: ಮಂಗಳೂರಿನ ಇಎಸ್ಐ ಆಸ್ಪತ್ರೆಯಲ್ಲಿ ಗುತ್ತಿಗೆ ಆಧಾರದಲ್ಲಿ ಕೆಲಸ ಮಾಡುತ್ತಿದ್ದ 9 ಮಂದಿ ಮಹಿಳಾ ಸಿಬಂದಿಗಳನ್ನು ಕೆಲಸದಿಂದ ವಜಾ ಮಾಡಲಾಗಿತ್ತು. ಈ ಬಗ್ಗೆ ಕಳೆದ ಒಂದು ವಾರದ ಹಿಂದೆ ಶಾಸಕ ಅಶೋಕ್ ರೈ ಅವರನ್ನು ಭೇಟಿಯಾಗಿ ಮನವಿ ಮಾಡಿ ಕೆಲಸ ಕೊಡಿಸುವಂತೆ ಕೇಳಿಕೊಂಡಿದ್ದರು. ಶಾಸಕ ಅಶೋಕ್ ರೈ ಅವರ ಸೂಚನೆಯಂತೆ 9 ಮಂದಿಗೆ ಮತ್ತೆ ಕೆಲಸ ದೊರಕಿದೆ. ಸಿಬಂದಿಗಳು ಶಾಸಕರನ್ನು ಭೇಟಿಯಾಗಿ ಕೃತಜ್ಞತೆ ಸಲ್ಲಿಸಿದರು.





