ಕರಾವಳಿ

ಕೇಪು: ಕೋಳಿ ಅಂಕ ಪ್ರಕರಣ;
ಶಾಸಕ ಅಶೋಕ್ ರೈ ಸಹಿತ 26 ಮಂದಿ ಖುಲಾಸೆ


ಪುತ್ತೂರು: 2025ರ ಡಿಸೆಂಬರ್ ತಿಂಗಳಲ್ಲಿ ಕೇಪು ಗ್ರಾಮದ ಉಳ್ಳಾಲ್ತಿ ದೇವಸ್ಥಾನದಲ್ಲಿ ನಡೆದ ಕೋಳಿ ಅಂಕ ವಿಚಾರಕ್ಕೆ ಸಂಬಂದಿಸಿದಂತೆ ಶಾಸಕ ಅಶೋಕ್ ರೈ ಸಹಿತ 26 ಮಂದಿಯ ಮೇಲಿನ ಪ್ರಕರಣವನ್ನು ಹೈಕೋರ್ಟ್ ಖುಲಾಸೆಗೊಳಿಸಿದೆ.


ಡಿ.20 ರಂದು‌ ಸದ್ರಿ ದೇವಸ್ಥಾನದ ವಠಾರದಲ್ಲಿ ಕೋಳಿ ಅಂಕ ನಡೆಸಲಾಗಿತ್ತು. ಕೋಳಿ ಅಂಕ ನಡೆಸಲು ಪೊಲೀಸ್ ಇಲಾಖೆಯ ಅನುಮತಿಯನ್ನು ಪಡೆದಿರಲಿಲ್ಲ. ಸದ್ರಿ ದೇವಸ್ಥಾನದಲ್ಲಿ ವರ್ಷಂಪ್ರತಿ ಈ ಕೋಳಿ ಅಂಕ ಹರಕೆ ರೂಪದಲ್ಲಿ ನಡೆಯುತ್ತದೆ. ಪೊಲೀಸ್ ಇಲಾಖೆ ಅನುಮತಿ ನೀಡಿರಲಿಲ್ಲ.‌ ಹರಕೆ ರೂಪದ ಈ ಕೋಳಿ ಅಂಕವು ಬಳಿಕ ಶಾಸಕ ಅಶೋಕ್ ರೈ ಮುಂದಾಳುತ್ವದಲ್ಲಿ ನಡೆದಿತ್ತು. ಈ ವೇಳೆ ಪೊಲೀಸರು ದಾಳಿ ನಡೆಸಿ ಶಾಸಕ ಅಶೋಕ್ ರೈ ಮತ್ತು ಇತರೆ 26 ಮಂದಿಯ ವಿರುದ್ದ ವಿಟ್ಲ ಪೊಲೀಸರು ಪ್ರಕರಣ ದಾಖಲಿಸಿದ್ದರು. ಇದೀಗ ಈ ಪ್ರಕರಣ ಹೈಕೋರ್ಟಿನಲ್ಲಿ ಖುಲಾಸೆಗೊಂಡಿದೆ.

Leave a Reply

Your email address will not be published. Required fields are marked *

error: Content is protected !!