ಕರಾವಳಿಕ್ರೈಂ

ಬಂಟ್ವಾಳ: ಗೂಡಿನಬಳಿ ನಿವಾಸಿಯ ಮೃತದೇಹ ನದಿ ನೀರಿನಲ್ಲಿ ಪತ್ತೆ- ಸಾವಿನಲ್ಲಿ ಸಂಶಯ ವ್ಯಕ್ತಪಡಿಸಿದ ಕುಟುಂಬಸ್ಥರು


ಬಂಟ್ವಾಳ, ಬಿ ಮೂಡ ಗ್ರಾಮದ ಕಂಚಿಕಾರ ಪೇಟೆಯ ಬಳಿ ನದಿ ಬದಿಯಲ್ಲಿ ಅಪರಿಚಿತ ವ್ಯಕ್ತಿಯೋರ್ವನ ಮೃತದೇಹ ನೀರಿನಲ್ಲಿ ತೇಲುತ್ತಿರುವ ಬಗ್ಗೆ ಮೇ.21ರಂದು ಬಂಟ್ವಾಳ ಕಸಬಾ ನಿವಾಸಿ ಸಾಕೀರ್(37) ಎಂಬವರಿಗೆ ಆತನ ಸ್ನೇಹಿತ ತಿಳಿಸಿದ್ದು, ಸಾಕೀರ್ ಹಾಗೂ ಇತರರು ಹೋಗಿ ನೋಡಿದಾಗ ಸುಮಾರು 50-55 ವರ್ಷದ ವ್ಯಕ್ತಿಯೋರ್ವರ ಮೃತದೇಹ ಕಂಡುಬಂದಿರುತ್ತದೆ ಎಂಬುದಾಗಿ ನೀಡಿದ ದೂರಿನ ಮೇರೆಗೆ ಬಂಟ್ವಾಳ ನಗರ ಪೋಲಿಸ್ ಠಾಣೆಯಲ್ಲಿ ಯು.ಡಿ.ಆರ್ NO 16/2026 ಕಲಂ :194 BNSS ರಂತೆ ಪ್ರಕರಣ ದಾಖಲಾಗಿರುತ್ತದೆ.




ಮೃತಪಟ್ಟ ವ್ಯಕ್ತಿಯನ್ನು ಬಂಟ್ವಾಳ ಗೂಡಿನಬಳಿ ನಿವಾಸಿ ಇರ್ಫಾನ್ (39) ಎಂಬುದಾಗಿ ಗುರುತಿಸಲಾಗಿದ್ದು ಈ ಬಗ್ಗೆ ಮೃತ ವ್ಯಕ್ತಿಯ ತಂದೆ ಗುರುತಿಸಿದ್ದಾರೆ. ಮೃತ ವ್ಯಕ್ತಿಯ ಮರಣದಲ್ಲಿ ಕುಟುಂಬ ಸದಸ್ಯರುಗಳು ಸಂಶಯ ವ್ಯಕ್ತಪಡಿಸಿದ ಹಿನ್ನೆಲೆಯಲ್ಲಿ, ಮೃತದೇಹವನ್ನು ಸೂಕ್ತ ವೈದ್ಯಕೀಯ ಪರೀಕ್ಷೆಗೆ ಒಳಪಡಿಸಿ, ವರದಿಯನ್ನು ಪಡೆದು ಮುಂದಿನ ಕಾನೂನುಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸರು ತಿಳಿಸಿದ್ದಾರೆ.

 

Leave a Reply

Your email address will not be published. Required fields are marked *

error: Content is protected !!