ಜಾನುವಾರು ಅಕ್ರಮ ಸಾಗಾಟ: ಓರ್ವನ ಬಂಧನ-ವಾಹನಕ್ಕೆ ಬೆಂಗಾವಲಾಗಿ ಕಾರಿನಲ್ಲಿ ಬಂದಿದ್ದ ಆರೋಪಿ ಪರಾರಿ
ವಿಟ್ಲ: ಪಿಕಪ್ ವಾಹನದಲ್ಲಿ ಜಾನುವಾರು ಅಕ್ರಮವಾಗಿ ಸಾಗಾಟ ಮಾಡುತ್ತಿದ್ದ ಆರೋಪದಲ್ಲಿ ಕೊಳ್ತಾಡು ಪಂಜರಕೋಡಿ ಎಂಬಲ್ಲಿ ಚಾಲಕನನ್ನು ಬಂಧಿಸಿ ವಾಹನವನ್ನು ವಶಕ್ಕೆ ಪಡೆದಿದ್ದಾರೆ.
ಪಿಕಪ್ ಚಾಲಕ ಬಾಳೆಪುಣಿ ನಿವಾಸಿ ಮುಹಮ್ಮದ್ ಹನೀಫ್ (44) ಬಂಧಿತ ಆರೋಪಿ.

ಮೇ 21ರಂದು ಬೆಳಗ್ಗೆ ಜಾನುವಾರುಗಳನ್ನು ಅಕ್ರಮವಾಗಿ ಸಾಗಾಟ ಮಾಡುತ್ತಿರುವ ಮಾಹಿತಿ ಪಡೆದ ಪೊಲೀಸರು ಪಂಜರಕೋಡಿ ಎಂಬಲ್ಲಿ ತೆರಳಿ ಪಿಕ್ ಅಪ್ ವಾಹನವನ್ನು ತಡೆದು ನಿಲ್ಲಿಸಿದರು. ಈ ವೇಳೆ ವಾಹನಕ್ಕೆ ಬೆಂಗಾವಲಾಗಿ ಕಾರಿನಲ್ಲಿ ಬಂದಿದ್ದ ಬಶೀರ್ ಎಂಬಾತ ಪೊಲೀಸರನ್ನು ಕಂಡು ಪರಾರಿಯಾಗಿದ್ದಾನೆ.
ಬಳಿಕ ಜಾನುವಾರು ಸಾಗಾಟ ಮಾಡುತ್ತಿದ್ದ ಪಿಕ್ ಅಪ್‌ನ್ನು ಪರಿಶೀಲಿಸಿದಾಗ ಎರಡು ಜಾನುವಾರುಗಳು ಪತ್ತೆಯಾಗಿದೆ. ಈ ಬಗ್ಗೆ ಪಿಕ್ಅಪ್ ಚಾಲಕನಲ್ಲಿ ವಿಚಾರಿಸಿದಾಗ ಪರವಾನಿಗೆ ಪಡೆಯದೆ ಜಾನುವಾರುಗಳನ್ನು ವಧೆ ಮಾಡಲು ಸಾಗಿಸುತ್ತಿರುವುದಾಗಿ ತಿಳಿಸಿದ್ದಾನೆನ್ನಲಾಗಿದೆ. ಕೃತ್ಯಕ್ಕೆ ಬಳಸಿದ ವಾಹನ, ಎರಡು ಜಾನುವಾರುಗಳನ್ನು ವಶಕ್ಕೆ ಪಡೆಯಲಾಗಿದೆ
ಆರೋಪಿ ಪಿಕಪ್ ಚಾಲಕ ಮುಹಮ್ಮದ್ ಹನೀಫ್ ಹಾಗೂ ಬಶೀರ್ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿಕೊಂಡು ತನಿಖೆ ನಡೆಸಲಾಗುತ್ತಿದೆ




